ಬೆಂಗಳೂರು: 2022-2023ರ ಬಜೆಟ್ ನಲ್ಲಿ ಆಯವ್ಯಯದ ಹಂಚಿಕೆಗಳಲ್ಲಿ ಕೇವಲ ಶೇಕಡಾ 56ರಷ್ಟು ಮಾತ್ರ ಹಣವನ್ನು ಖರ್ಚು ಮಾಡಲಾಗಿದೆ. ಕೊಟ್ಟ ಭರವಸೆ ಈಡೇರಿಸದೆ ಬಿಜೆಪಿ ಸರ್ಕಾರ ಜನರನ್ನು ಮೋಸ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಕಿವಿ ಮೇಲೆ ಹೂವು ಇಟ್ಟು ಸದನಕ್ಕೆ ಬಂದು ಗಮನ ಸೆಳೆದರು.
ಇದೇ ವೇಳೇ ಸಿದ್ದರಾಮಯ್ಯ ಅವರನ್ನು ಕಿಚಾಯಿಸಿದ ಸಿಎಂ ಬಸವರಾಜ ಬೊಮ್ಮಾಯಿಯವರು ಮುಂದಿನ ಸಲವೂ ಸಿದ್ದರಾಮಯ್ಯ ಹೂವು ಇಟ್ಟುಕೊಳ್ಳುತ್ತಾರೆ ಅಂತ ತಿಳಿಸಿದರು.
ಇದೇ ವೇಳೆ ಸದನದಲ್ಲಿ ಉಭಯ ಸದ್ಯಸರುಗಳು ಚರ್ಚೆ ನಡೆಸಿದರು. ಇದೇ ವೇಳೇ ಸಭಾಪತಿಗಳು ಸಿದ್ದರಾಮಯ್ಯವರು ಇಟ್ಟುಕೊಂಡಿರುವ ಹೂ ಕೇಸರಿಯಾಗಿದೆ ಅಂತ ಕಿಚಾಯಿಸಿದರು. ಬಳಿಕ ಸದನದಲ್ಲಿ ಸಿಎಂ ಬಜೆಟ್ ಅನ್ನು ಮಂಡನೆ ಮಾಡಲು ಮುಂದಾದರು.