ಸಿದ್ದು-ಇಬ್ರಾಹಿಂ ಮುಖಾಮುಖಿ: ಹೇಳಿದಷ್ಟು ಕೇಳಯ್ಯಾ ಎಂದು ಗದರಿದ ಸಿದ್ದರಾಮಯ್ಯ

Prasthutha|

ಬೆಂಗಳೂರು: ಸಿ.ಎಂ ಇಬ್ರಾಹಿಂ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಇಂದು  ಮುಖಾಮುಖಿಯಾದರು.

- Advertisement -

ಸಿಎಂ ಇಬ್ರಾಹಿಂರನ್ನು ನೋಡುತ್ತಿದ್ದಂತೆ ‌ಸಿದ್ದರಾಮಯ್ಯ, “ಮಾ.31ರಂದು ಮನೆಗೆ ಬರುತ್ತೇನೆ ಸುಮ್ಮನಿರು” ಎಂದರು. ಅದಕ್ಕೆ ಇಬ್ರಾಹಿಂ, “ಯಾವಾಗ ಹೇಳಿದ್ರಿ ನೀವು?” ಎಂದು ಪ್ರಶ್ನಿಸಿದರು. ‘ಬಾಷಾಗೆ ಹೇಳಿದ್ದೇನೆ. ಮನೆಗೆ ಬರುತ್ತೇನೆ ಎಂದು ಹೇಳಿದ್ದೇನೆ ಇರೋ” ಎಂದು ಸಿದ್ದರಾಮಯ್ಯ ಹೇಳಿದರು.

“ಲೇ ಇರೋ.. ಆತುರ ಮಾಡಬೇಡ, ಸುಮ್ಮನೆ ಇರು.. ಹೇಳಿದಷ್ಟು ಕೇಳಯ್ಯಾ” ಎಂದು ಸಿದ್ದರಾಮಯ್ಯ ಕೋಪದಲ್ಲೇ ತೆರಳಿದರು.

- Advertisement -

ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಸಿ.ಎಂ ಇಬ್ರಾಹಿಂ ಇತ್ತೀಚೆಗೆ ಹೇಳಿದ್ದರು.



Join Whatsapp