ಸಿದ್ದೀಕ್ ಕಾಪ್ಪನ್ ಬಿಡುಗಡೆಗೆ ಎದುರಾಗಿದೆ ತಡೆ: ಇಡಿ ಪ್ರಕರಣ ವಿಚಾರಣೆಗೆ ಬಾಕಿಯಿದೆಯೆಂದ ಅಧಿಕಾರಿಗಳು

Prasthutha|

ಲಕ್ನೋ: ಅತ್ಯಾಚಾರ ಮತ್ತು ಕೊಲೆ ವರದಿಗಾರಿಕೆಗೆ ತೆರಳಿದಕ್ಕಾಗಿ ಸುಳ್ಳು ಕೇಸಿನೊಂದಿಗೆ ಬಂಧಿಸಲ್ಪಟ್ಟು ಎರಡು ವರ್ಷಗಳ ಬಳಿಕ ಸುಪ್ರೀಂ ಜಾಮೀನು ನೀಡಿ ಬಿಡುಗಡೆಯ ನಿರೀಕ್ಷೆಯಲ್ಲಿದ್ದ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಬಿಡುಗಡೆಗೆ ತಡೆ ಎದುರಾಗಿದೆ. ಸಿದ್ದೀಕ್ ಕಾಪ್ಪನ್ ಅವರ ಮೇಲೆ ದಾಖಲಾಗಿರುವ ಇಡಿ ಪ್ರಕರಣದ ವಿಚಾರಣೆ ಇನ್ನೂ ಬಾಕಿಯಿರುವುದರಿಂದ ಅವರು ಜೈಲಿನಲ್ಲಿಯೇ ಮುಂದುವರಿಯಲಿದ್ದಾರೆ ಎಂದು ಕಾರಾಗೃಹ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಹತ್ರಾಸ್ ಸಾಮೂಹಿಕ ಅತ್ಯಾಚಾರದ ವರದಿ ಮಾಡಲು ತೆರಳುತ್ತಿದ್ದ ಸಿದ್ದೀಕ್ ಕಾಪ್ಪನ್ ಅವರನ್ನು ಉತ್ತರ ಪ್ರದೇಶ ಪೊಲೀಸರು 2020ರ ಅಕ್ಟೋಬರ್’ನಲ್ಲಿ UAPA ಕಾಯ್ದೆ ಅಡಿಯಲ್ಲಿ ಬಂಧಿಸಿದ್ದು, ಈ ಪ್ರಕರಣದಲ್ಲಿ ಅವರನ್ನು ಬಿಡುಗಡೆಗೊಳಿಸುವಂತೆ ಸುಪ್ರೀಮ್ ಕೋರ್ಟ್ ಆದೇಶಿಸಿತ್ತು.

ಈ ಮಧ್ಯೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಪ್ರಕರಣವೊಂದು ವಿಚಾರಣೆಗೆ ಬಾಕಿಯಿರುವುದರಿಂದ ಸಿದ್ದೀಕ್ ಕಾಪ್ಪನ್ ಅವರು ಜೈಲಿನಲ್ಲಿಯೇ ಮುಂದುವರಿಯಲಿದ್ದಾರೆ ಎಂದು ಕಾರಾಗೃಹದ ಡಿಜಿ ಪ್ರೊ ಸಂತೋಷ್ ವರ್ಮಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

- Advertisement -

ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 1 ಲಕ್ಷ ರೂ.ಗಳ ಎರಡು ಶ್ಯೂರಿಟಿ ಮತ್ತು ಅಷ್ಟೇ ಮೊತ್ತದ ವೈಯಕ್ತಿಕ ಬಾಂಡ್ ಅನ್ನು ಒದಗಿಸುವಂತೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅನುರೋಧ್ ಮಿಶ್ರಾ ಅವರು ತನ್ನ ಜಾಮೀನು ಆದೇಶದಲ್ಲಿ ಸಿದ್ದೀಕ್ ಕಾಪ್ಪನ್ ಅವರಿಗೆ ಸೂಚಿಸಿದ್ದಾರೆ.



Join Whatsapp