ನವದೆಹಲಿ: ಸಿದ್ದೀಕ್ ಕಾಪ್ಪನ್ ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿರುವುದು ನ್ಯಾಯಕ್ಕಾಗಿ ಧ್ಚನಿ ಎತ್ತಿದ ಜನರಿಗೆ ಪರಿಹಾರ ಒಂದು ಮೂಲವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ. ಸಲಾಂ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಈ ತೀರ್ಪು ನ್ಯಾಯಾಂಗದ ಮೇಲಿನ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಲಿದೆ ಮತ್ತು ದೇಶಾದ್ಯಂತವಿರುವ ರಾಜಕೀಯ ಖೈದಿಗಳಿಗೆ ನಿರೀಕ್ಷೆಯ ಕಿರಣವಾಗಿದೆ. ಈ ಒಟ್ಟು ಪ್ರಕರಣವು ಕಲ್ಪಿತವಾಗಿದ್ದು, ಇದನ್ನು ಎಂದೂ ಸಂಭವಿಸದ ಕಾಲ್ಪನಿಕ ಅಪರಾಧವನ್ನು ಸೃಷ್ಟಿಸುವ ಉದ್ದೇಶದೊಂದಿಗೆ ನಡೆಸಲಾಗಿತ್ತು. ಬರ್ಬರ ಸಾಮೂಹಿಕ ಅತ್ಯಾಚಾರ ಮತ್ತು ಕುಟುಂಬದೊಂದಿಗೆ ಯುಪಿ ಪೊಲೀಸರ ಅಮಾನುಷ ವರ್ತನೆಯಿಂದ ಜನರ ಆಕ್ರೋಶವನ್ನು ದೂರ ಮಾಡುವ ನಿಟ್ಟಿನಲ್ಲಿ ಅಮಾಯಕ ವಿದ್ಯಾರ್ಥಿಗಳು ಮತ್ತು ಪತ್ರಕರ್ತ ಕಾಪ್ಪನ್ ರನ್ನು ಬಲಿಪಶು ಮಾಡಿದಂತೆಯೇ, ಯುಪಿ ಪೊಲೀಸರು ಅವರಿಗೆ ಜಾಮೀನು ದೊರಕುವಲ್ಲಿಯೂ ಅಡಚಣೆ ಉಂಟು ಮಾಡಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದರು.
ಕಾಪ್ಪನ್ ರವರ ಅನ್ಯಾಯಯುತ ಜೈಲುವಾಸದ ವಿರುದ್ಧ ದೇಶ-ವಿದೇಶಗಳ ಸಮಾನ ಮನಸ್ಕ ಜನರು ಧ್ವನಿ ಎತ್ತಿದರು ಮತ್ತು ಇದು ಅವರೆಲ್ಲರಿಗೂ ಪರಿಹಾರದ ಅವಕಾಶವಾಗಿದೆ. ಕಾಪ್ಪನ್ ಹಾಗೂ ಆತನ ಕುಟುಂಬದ ಕಠಿಣ ಸಮಯವು ಬೇಗನೇ ಅಂತ್ಯಗೊಳ್ಳಲಿದೆ ಮತ್ತು ಇತರ ಅಮಾಯಕರ ಬಿಡುಗಡೆಗೂ ಇದು ದಾರಿ ತೆರೆಯಲಿದೆ ಎಂದು ಒ.ಎಂ.ಎ.ಸಲಾಂ ಆಶಾವಾದ ವ್ಯಕ್ತಪಡಿಸಿದ್ದಾರೆ.