ಶ್ರೀಘದಲ್ಲೇ ಸಿದ್ದರಾಮಯ್ಯ ಜೈಲಿಗೆ ಹೋಗಲಿದ್ದಾರೆ ಎಂದ ನಳಿನ್ ಕುಮಾರ್ ಕಟೀಲ್

Prasthutha|

ಮಂಡ್ಯ: ಚೆಕ್ ಮೂಲಕ ಒಂದೂವರೆ ಕೋಟಿ ಲಂಚ ಪಡೆದ ಪ್ರಕರಣದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜನವರಿ ವೇಳೆಗೆ ಜೈಲು ಸೇರಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

- Advertisement -

ಈ ಕುರಿತು ಬಿಜೆಪಿ ಕಾರ್ಯಕರ್ತರ ಜನಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಮೇಲೆ ಹರಿ ಹಾಯ್ದಿದ್ದಾರೆ. ನಿಮ್ಮ ಮೇಡಂ , ನಾಯಕ , ಅಧ್ಯಕ್ಷ ಈಗಾಗಲೇ ಜಾಮೀನಿನ ಮೇಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ತಿಹಾರ್ ಜೈಲಿನಲ್ಲಿ ಇದ್ದುದು ಏಕೆ? ಸಿದ್ದರಾಮಯ್ಯ ಕೂಡ ಜೈಲಿಗೆ ಹೋಗುವುದು ಖಚಿತ. ಲಂಚ ಪಡದ ಪ್ರಕರಣ ಈಗಾಗಲೇ ಹೊರಬಂದಿದೆ, ಅರ್ಕಾವತಿ ಡೀನೋಟಿಫೈ ಹಗರಣ ಕೂಡ ಹೊರಬರಲಿದೆ ಎಂದಿದ್ದಾರೆ.



Join Whatsapp