15 ದಿನದಲ್ಲಿ ಸಿದ್ದರಾಮಯ್ಯ ರಾಜೀನಾಮೆ: ಬಿಎಸ್‌ವೈ

Prasthutha|

- Advertisement -

ಕೊಪ್ಪಳ: ಸಿಎಂ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಭಾಗಿಯಾಗಿದ್ದು ನೂರರಷ್ಟು ಸತ್ಯ. ಶೀಘ್ರವೇ ಇದೇ ಪ್ರಕರಣ ಸಂಬಂಧ 15 ದಿನದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾನೂನು ಶಿಕ್ಷೆ ಅನುಭವಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸಂಡೂರು ಕ್ಷೇತ್ರದ ಬೊಮ್ಮಘಟ್ಟ, ಚೋರನೂರು, ಬಂಡ್ರಿ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದರು. ಮುಡಾದಲ್ಲಿ ಭ್ರಷ್ಟಾಚಾರ ನಡೆದಿದ್ದಕ್ಕೆ ಸಿಎಂ 14 ಸೈಟುಗಳನ್ನು ವಾಪಸ್ಸು ನೀಡಿದರು. ಎಸ್‌ಐಟಿ ರಚಿಸಿರುವ ಲೋಕಾಯುಕ್ತ ತನಿಖೆ ಪಾರದರ್ಶಕವಾಗಿಲ್ಲ. ಇದಕ್ಕಾಗಿಯೇ ಶೀಘ್ರದಲ್ಲಿ ಇಡಿ, ಸಿಐಡಿಯವರು ಸಿದ್ದರಾಮಯ್ಯರನ್ನು ವಿಚಾರಣೆಗೆ ಕರೆಯಲಿದ್ದಾರೆ. ಇನ್ನು 10-15 ದಿನಗಳಲ್ಲಿ ಸಿಎಂ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

- Advertisement -

ರಾಜ್ಯದ ಮೂರು ಕ್ಷೇತ್ರಗಳಲ್ಲಿ ನಾನು ಪ್ರಚಾರ ಮಾಡಿದ್ದೇನೆ. ಮೂರು ಕ್ಷೇತ್ರದಲ್ಲೂ ಬಿಜೆಪಿ ಪರವಾದ ವಾತಾವರಣ ಇದೆ. ಸಂಡೂರಿನಲ್ಲೂ ಅಭೂತಪೂರ್ವ ಜನ ಬೆಂಬಲ ಸಿಗುತ್ತಿದೆ. ಜನರು ಕಾಂಗ್ರೆಸ್‌ನ್ನು ತಿರಸ್ಕಾರ ಮಾಡಲಿದ್ದಾರೆ. ಶ್ರೀರಾಮಲು, ಜನಾರ್ದನರೆಡ್ಡಿ ಜೋಡಿ ಇಲ್ಲಿ ಮೋಡಿ ಮಾಡುತ್ತಿದೆ. ಅವರು ಈ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ. ನಾನು ಸಿಎಂ ಆಗಿದ್ದಾಗ ರೈತರು, ಬಡವರು ಯಾವುದೇ ಕಷ್ಟ ಅನುಭವಿಸದೇ ಸುಭದ್ರ ಜೀವನ ನಡೆಸುವ ಯೋಜನೆಗಳನ್ನು ಜಾರಿ ಮಾಡಿದ್ದೆ. ಕಾಂಗ್ರೆಸ್ ಸರಕಾರ ಭಾಗ್ಯ ಲಕ್ಷ್ಮಿ ಬಾಂಡ್, ಸೈಕಲ್ ಭಾಗ್ಯ ಸೇರಿ ಹಲವು ಯೋಜನೆಗಳನ್ನು ನಿಲ್ಲಿಸಿದೆ ಎಂದು ಟೀಕಿಸಿದರು.



Join Whatsapp