ಮೋದಿ ಮೋದಿ ಎನ್ನುತ್ತಿದ್ದ ಯುವಕರಿಗೆ ಮೋದಿ ಹಾಕಿದ್ದು ತಿಮ್ಮಪ್ಪನ 3 ನಾಮ : ಸಿದ್ದರಾಮಯ್ಯ ವ್ಯಂಗ್ಯ

Prasthutha: December 4, 2021

► ಮೋದಿ ಏನು ಹೇಳುತ್ತಾರೋ ಅದಕ್ಕೆ ಉಲ್ಟಾ ತಿಳಿದುಕೊಳ್ಳಿ

ಚಿಕ್ಕಮಗಳೂರು: ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ಪ್ರಚಾರದ ಕಾವು ಹೆಚ್ಚಾಗಿದ್ದು, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಿದ್ದು ಮೋದಿ ಮೋದಿ ಎನ್ನುತ್ತಿದ್ದ ಯುವಕರಿಗೆ ಮೋದಿ ಹಾಕಿದ್ದು ತಿರುಪತಿ ತಿಮ್ಮಪ್ಪನ 3 ನಾಮ ಎಂದು ವ್ಯಂಗ್ಯವಾಡಿದ್ದಾರೆ.

ಭಾರತದ ಇತಿಹಾಸದಲ್ಲಿಯೇ ಯಾರಾದರೂ ಓರ್ವ ಪ್ರಧಾನ ಮಂತ್ರಿ ಇಷ್ಟೊಂದು ಸುಳ್ಳು ಹೇಳಿರುವ ವ್ಯಕ್ತಿ ಯಾರಾದರೂ ಬಂದಿದ್ದರೆ ಅದು ನರೇಂದ್ರ ಮೋದಿ. ನರೇಂದ್ರ ಮೋದಿ ಬಹಳ ದೊಡ್ಡ ಡ್ರಾಮಾಟಿಸ್ಟ್ ಆ್ಯಕ್ಟರ್. ಮೋದಿ ಏನು ಹೇಳುತ್ತಾರೋ ಅದಕ್ಕೆ ಉಲ್ಟಾ ತಿಳಿದುಕೊಳ್ಳಿ ಎಂದಿದ್ದಾರೆ. ಮೋದಿಯ ಹೆಸರೆತ್ತಕೊಂಡೇ ಬಿಜೆಪಿ ನಾಯಕರು ಇಂದು ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಮೊದಲೆಲ್ಲಾ ಯುವಕರೆಲ್ಲರು ಹೋದಲ್ಲಿ ಬಂದಲ್ಲಿ ಮೋದಿ… ಮೋದಿ… ಮೋದಿ… ಅಂತಿದ್ರು, ಈಗ ಮೋದಿ ಎಲ್ಲರಿಗೂ ತಿರುಪತಿ ತಿಮ್ಮಪ್ಪನ 3 ನಾಮ ಹಾಕಿದ್ದಾರೆ, 51 ಲಕ್ಷದ 33 ಸಾವಿರ ಕೋಟಿರೂಪಾಯಿ ಇದ್ದ ದೇಶದ ಸಾಲವನ್ನು ಇಂದು ಮೋದಿ 135 ಲಕ್ಷ ಕೋಟಿಯಷ್ಟು ಮಾಡಿದ್ದಾರೆ. ಮೋದಿ ಕಳೆದ ಏಳು ವರ್ಷದಲ್ಲಿ 82 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!