ರಾಮಕೃಷ್ಣ ಹೆಗಡೆಯಂತೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ: ಆರ್.ಅಶೋಕ್

Prasthutha|

ಬೆಂಗಳೂರು: ಮುಡಾ ಕೇಸ್ ನಲ್ಲಿ ಹಗರಣ ಆಗಿಯೇ ಇಲ್ಲ ಎದವರು ಹಿಂದಿನ ಕಮಿಷನರ್ ರನ್ನು ಯಾಕೆ ಅಮಾನತು ಮಾಡಿದ್ರಿ? ಇದರಿಂದ ಮುಡಾದಲ್ಲಿ ಹಗರಣ ಆಗಿರುವುದು ಗೊತ್ತಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

- Advertisement -

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಒಂದೇ ಒಂದೇ ವರ್ಷದಲ್ಲಿ ಅನೇಕ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿದೆ. ಹೆಡ್ ಮಾಸ್ಟರ್ ಸಿದ್ದರಾಮಯ್ಯ ಹಗರಣದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಇದು ನಾಚಿಕೆಗೇಡು. ಮುಡಾದಲ್ಲಿ ದೊಡ್ಡ ಆಕ್ರಮ ಆಗಿದೆ. ಹೈಕಮಾಂಡ್ ಸಿದ್ದರಾಮಯ್ಯ ಅವರನ್ನ ಎರಡು ಬಾರಿ ಕರೆದು ವಿವರಣೆ ಕೇಳಿದೆ. ಈಗ ಮುಡಾ ಅಧಿಕಾರಿಯನ್ನ ಅಮಾನತು ಮಾಡಿದ್ದಾರೆ. ಸಿದ್ದರಾಮಯ್ಯ, ಕಾಂಗ್ರೆಸ್ ನವರು ಏನು ತಪ್ಪಿಲ್ಲ ಎಂದಿದ್ದರು. ಹಾಗಾದರೆ ಈಗ ಯಾಕೆ ಅಧಿಕಾರಿ ಅಮಾನತು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಮಾಜಿ ಸಿಎಂ ರಾಮಕೃಷ್ಣ ಹೆಗಡೆಯವರ ‌ಮೇಲೆ ಆರೋಪ ಬಂದಾಗ ಅವರು ರಾಜೀನಾಮೆ ಕೊಟ್ಟಿದ್ದರು. ಅದೇ ರೀತಿ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ‌ಎದುರಿಸಲಿ ಎಂದು ಸವಾಲ್‌ ಹಾಕಿದ್ದಾರೆ

- Advertisement -

50:50 ಅನುಪಾತವೇ ಅಕ್ರಮ ಆಗಿದೆ ಅಂತ ಅಮಾನತು ಮಾಡಿದ್ದಾರೆ. ಇದಕ್ಕಿಂತ ಸಾಕ್ಷಿ ಬೇಕಾ? ಪದೇ ಪದೇ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ನವರು ಮಾತಾಡ್ತಾರೆ. ತನಿಖೆಗೆ ಮಾತ್ರ ರಾಜ್ಯಪಾಲರು ಆದೇಶ ಮಾಡಿದ್ರು. ಕಾಂಗ್ರೆಸ್ ಅವರು ಏನು ತಪ್ಪೇ ಮಾಡಿಲ್ಲ ಎಂದು ಸಹ, ಆಯೋಗ ಯಾಕೆ ಮಾಡಿದ್ರಿ? ಸಿಎಂ ಮೇಲೆ ಆರೋಪ ಬಂದಿದೆ. ಅವರೇ ಆಯೋಗ ರಚನೆ ಮಾಡೋಕೆ ಅಧಿಕಾರ ಇದೆಯಾ? ಅವರ ಮೂಗಿನ ನೇರಕ್ಕೆ ಆಯೋಗ ರಚನೆ ಮಾಡೋದಾ? ಇಲ್ಲಿ ಸ್ಪಷ್ಟವಾಗಿ ಹಗರಣ ಆಗಿದೆ. ಕೋರ್ಟ್ ಕೂಡಾ ಎಲ್ಲಾ ನೋಡ್ತಿದೆ. ಜನರ ಹಣ ಉಳಿಸೋ ಕೆಲಸ ಕೋರ್ಟ್ ಮಾಡೋ ವಿಶ್ವಾಸ ನಮಗೆ ಇದೆ ಎಂದಿದ್ದಾರೆ.



Join Whatsapp