ಬೆಂಗಳೂರು: ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ತಾನೊಬ್ಬನೇ ಮಾಸ್ ಲೀಡರ್ ಭ್ರಮೆಯಲ್ಲಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮೈಸೂರಿನಲ್ಲಿ ಯಾರ ಹೆಸರಲ್ಲಿ ಎಲ್ಲೆಲ್ಲಿ ಆಸ್ತಿ ಮಾಡಿದ್ದಾರೆ ಎಂಬುದು ಗೊತ್ತು. ಕಾಲ ಬಂದಾಗ ಎಲ್ಲವನ್ನು ಬಿಚ್ಚಿಡುತ್ತೇನೆ ಎಂದು ಹೇಳಿದರು.
ರಾಜಕೀಯದಲ್ಲಿ ಸಿದ್ದರಾಮಯ್ಯ ಅವರಷ್ಟೇ ಸರ್ವೀಸ್ ನನಗೂ ಆಗಿದೆ. ಆದರೆ ಅವರು ಕೆಲವು ನಾಯಿ- ನರಿಗಳ ಜತೆ ಸೇರಿ ನನ್ನ ವಿರುದ್ಧ ಬಾಯಿಗೆ ಬಂದಂತೆ ತಮ್ಮ ಘನತೆ- ಗೌರವ ಮೀರಿ ಮಾತನಾಡಿದ್ದಾರೆ. ಯಾರದೋ ಮಾತು ಕೇಳಿ ನನ್ನ ಮೇಲೆ ಪರ್ಸೆಂಟೇಜ್ ಆರೋಪ ಮಾಡಿರುವುದು ನೋವು ಉಂಟು ಮಾಡಿದೆ ಎಂದು ಹೇಳಿದರು.