ಗ್ಯಾರಂಟಿ ಯೋಜನೆ ಜಾರಿಗೊಳಿಸುವ ಭರದಲ್ಲಿ ಸಿದ್ದರಾಮಯ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಕಡೆಗಣಿಸಿದೆ: ಆರ್ ಅಶೋಕ್

Prasthutha|

ಬೆಂಗಳೂರು: ಗ್ಯಾರಂಟಿ ಯೋಜನೆ ಜಾರಿಗೊಳಿಸುವ ಭರದಲ್ಲಿ ಸಿದ್ದರಾಮಯ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಕಡೆಗಣಿಸಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದ್ದಾರೆ.

- Advertisement -

ನಗರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಗೋಷ್ಟಿ ನಡೆಸಿ ಮಾತಾಡಿದ ಅವರು, ಹುಟ್ಟಿದ ಮಗು ಒಂದು ವರ್ಷದಲ್ಲಿ ಅಂಬೆಗಾಲಿಡಲು ಆರಂಭಿಸುತ್ತದೆ, ಆದರೆ ಕಾಂಗ್ರೆಸ್ ಸರ್ಕಾರ ಅಂಬೆಗಾಲಿಡುವ ದಿನಗಳು ಇನ್ನೂ ದೂರ, ತಮ್ಮ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಭರದಲ್ಲಿ ಸಿದ್ದರಾಮಯ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಹೇಳಿದರು.


ಒಂದು ರಸ್ತೆ ದುರಸ್ತಿ ಕಾಣುತ್ತಿಲ್ಲ, ಯಾವುದೇ ನೀರಾವರಿ ಯೋಜನೆ ಬಗ್ಗೆ ಸರ್ಕಾರ ಯೋಚನೆ ಮಾಡಿಲ್ಲ, ಮಳೆಗಾಲದಲ್ಲಿ ತೊಂದರೆಗೊಳಗಾಗುವ ಪ್ರದೇಶಗಳಲ್ಲಿ ಸೇತುವೆಗಳನ್ನು ನಿರ್ಮಿಸುವ ಕೆಲಸ ಕೈಗೆತ್ತಿಕೊಂಡಿಲ್ಲ ಎಂದು ಹೇಳಿದರು.

- Advertisement -


ರಾಜ್ಯದ ನಾನಾ ಭಾಗಗಳಲ್ಲಿ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿರುವ ಶಾಲಾ ಕಟ್ಟಡಗಳಿಗೆ ತುರ್ತು ಕಾಯಕಲ್ಪದ ಅವಶ್ಯಕತೆಯಿದೆ ಅದರೆ, ಈ ವರ್ಷ ಯಾವುದೇ ಶಾಲೆಯ ದುರಸ್ತಿ ಕಾರ್ಯ ನಡೆಯಲ್ಲ ಅಂತ ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಹೇಳಿದ್ದಾರಂತೆ ಎಂದು ಅಶೋಕ ಹೇಳಿದರು. ರಸ್ತೆ, ಕುಡಿಯುವ ನೀರಿನ ಸೌಲಭ್ಯಗಳ ಬಗ್ಗೆ ಕೇಳಿದರೆ, ಸರ್ಕಾರದ ಮಂತ್ರಿಗಳು ಮತ್ತು ಶಾಸಕರು, ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೀವಲ್ಲ, ಅದರಲ್ಲೇ ಎಲ್ಲ ಸರಿಮಾಡಿಕೊಳ್ಳಬೇಕೆಂದು ಧಿಮಾಕು ಪ್ರದರ್ಶಿಸುತ್ತಾರಂತೆ ಎಂದು ಅಶೋಕ ಹೇಳಿದರು.



Join Whatsapp