ಸಿದ್ದರಾಮಯ್ಯಗೆ ಈಗ ಮೊದಲಿದ್ದಷ್ಟು ಸ್ವಾತಂತ್ರ್ಯ ಇಲ್ಲ: ಹೆಚ್‌. ಆಂಜನೇಯ

Prasthutha|

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಮುಖ್ಯಂತ್ರಿಯಾದಾಗ ಇದ್ದ ಹಾಗಿಲ್ಲ, ಎಲ್ಲೋ ಅವರಿಗೆ ಒತ್ತಡ ಬೀಳ್ತಾ ಇದೆ ಎಂದು ಜನಸಾಮನ್ಯರು ಅಂದುಕೊಳ್ಳುತ್ತಿರುವಾಗಲೇ “ಇದೇ ನಿಜ” ಎಂಬಂತೆ ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ನಾಯಕ ಹೆಚ್. ಆಂಜನೇಯ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ 2013-18ರ ಅವಧಿ ಸುವರ್ಣಯುಗವಾಗಿತ್ತು. ಅವಾಗಿನ ಸ್ವಾತಂತ್ರ್ಯ ಈಗ ಇದ್ದಂತಿಲ್ಲ ಎಂದು ಆಂಜನೇಯ ಹೇಳಿದ್ದಾರೆ.

- Advertisement -

ನಗರದಲ್ಲಿ ನಡೆದ ಗವಿಮಾರ್ಗ ಪುಸ್ತಕ ಬಿಡುಗಡೆ, ವಿ.ಪಿ. ಸಿಂಗ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮತ್ತು ‘ಮಂಡಲ್‌ ವರದಿ ಆಗಿದ್ದೇನು?’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಆ ಅವಧಿಯಲ್ಲಿ ಸಿದ್ದರಾಮಯ್ಯ ಅವರಿಂದ ಕ್ರಾಂತಿಕಾರಕ ಕೆಲಸಗಳು ಆಗಿದ್ದವು. ಹಿಂದಿನ ದಿನ ಚರ್ಚೆಯಾದರೆ, ಮರುದಿನವೇ ಜಾರಿಯಾಗುತ್ತಿತ್ತು. ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಈ ಬಾರಿ ಅಂಥ ಸ್ವಾತಂತ್ರ್ಯ ಮುಖ್ಯಮಂತ್ರಿಯವರಿಗೆ ಇಲ್ಲ ಎಂದನ್ನಿಸುತ್ತಿದೆ. ಶಾಸಕರ ಒತ್ತಡವೂ ಸೇರಿದಂತೆ ಬೇರೆ ಬೇರೆ ವಿಚಾರಗಳು ಇದಕ್ಕೆ ಕಾರಣ ಇರಬೇಕು. ಆದರೆ ಯಾವುದೇ ಒತ್ತಡವಿದ್ದರೂ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯವನ್ನು ಬಿಡುವವರಲ್ಲ ಎಂದು ಆಂಜನೇಯ ಹೇಳಿದರು.

- Advertisement -

ಕಾಂತಾರಾಜ ಜನಗಣತಿ ವರದಿಯನ್ನು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿ ಸಿದ್ಧಪಡಿಸಲಾಗಿದೆ. ಆ ಜಾತಿಯವರನ್ನು ಹೆಚ್ಚು ಸೇರಿಸಿದ್ದಾರೆ, ಈ ಜಾತಿಯವರನ್ನು ಕಡಿಮೆ ಮಾಡಿದ್ದಾರೆ ಎಂದೆಲ್ಲ ಸುಳ್ಳು ಸುದ್ದಿಯನ್ನೇ ಹರಡಿ ವರದಿ ಸ್ವೀಕರಿಸಲೂ ಬಿಟ್ಟಿಲ್ಲ. ಕಾಂತರಾಜ ವರದಿಯಂತೆ ಸದಾಶಿವ ಆಯೋಗದ ವರದಿಯೂ 12 ವರ್ಷಗಳಿಂದ ನನೆಗುದಿಗೆ ಬಿದ್ದಿದೆ ಎಂದು ಆಂಜನೇಯ ವಿಷಾದಿಸಿದರು.



Join Whatsapp