ಸಿದ್ದರಾಮಯ್ಯ ಸಭೆಗೆ ಗೈರು: ಸತೀಶ್ ಜಾರಕಿಹೊಳಿ ಸ್ಪಷ್ಟನೆ

Prasthutha|

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದ ಉಪಾಹಾರ ಸಭೆಗೆ ಗೈರು ಹಾಜರಾದ ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಕಾರಣ ತಿಳಿಸಿದ್ದಾರೆ. ತಾನು ಅನಾರೋಗ್ಯದಲ್ಲಿದ್ದೆ. ಆ ಕಾರಣ ಸಿಎಂ ಕರೆದ ಉಪಾಹಾರ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

- Advertisement -

ಕಳೆದ 3-4 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದೇನೆಂದೂ, ವಿಶ್ರಾಂತಿ ಪಡೆಯುತ್ತಿದ್ದೇನೆಂದೂ ಜಾರಕಿಹೊಳಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆರೋಗ್ಯ ಮೊದಲು, ನಂತರ ರಾಜಕೀಯ. ಅನಾರೋಗ್ಯದಲ್ಲಿದ್ದ ತಾನು ಆಹ್ವಾನ ಬಂದಿದ್ದರೂ ಸಿಎಂ ಕರೆದಿದ್ದ ಸಭೆಗೆ ನಾನು ಪ್ರಯಾಣಿಸಿಲ್ಲ ಎಂದರು.

- Advertisement -

ಸಭೆಯಲ್ಲಿನ ಬೆಳವಣಿಗೆಗಳು ನನಗೆ ತಿಳಿದಿರಲಿಲ್ಲ. ನಾನು ಭಾನುವಾರ ಬೆಂಗಳೂರಿಗೆ ಹೋಗುತ್ತೇನೆ ಮತ್ತು ವಿವರಗಳನ್ನು ತಿಳಿಸುತ್ತೇನೆ ಎಂದೂ ಸಚಿವರು ಹೇಳಿದರು.

ಈ ಮದ್ಯೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಆಹ್ವಾನ ನೀಡದ ಕಾರಣ ಉಪಹಾರ ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ಪಾಟೀಲ್ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಸಿಎಂ ಸಿದ್ದರಾಮಯ್ಯ ಅವರ ಅಧಿಕಾರಾವಧಿ ಸಾರ್ವಜನಿಕ ಹಿತಾಸಕ್ತಿಯಲ್ಲ ಎಂದು ಪ್ರತಿಕ್ರಿಯಿಸಲು ನಿರಾಕರಿಸಿದರು.




Join Whatsapp