ನಕಲಿ ಆರ್ ಟಿ ಪಿ ಸಿ ಆರ್ ವರದಿ ತೋರಿಸಿ ರಾಜ್ಯ ಪ್ರವೇಶ: ಉಳ್ಳಾಲದಲ್ಲಿ ಏಳು ಮಂದಿ ಬಂಧನ

Prasthutha|

ಮಂಗಳೂರು: ನಕಲಿ ಆರ್ ಟಿಪಿಸಿಆರ್ ವರದಿ ತೋರಿಸಿ ದಕ್ಷಿಣ ಕನ್ನಡ ಜಿಲ್ಲಾ ಪ್ರವೇಶ ಮಾಡಿದ ಕೇರಳ ಮೂಲದ ಏಳು ಜನರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.


ಇನ್ನೋವಾ ಕಾರಲ್ಲಿ ಆಗಮಿಸಿದ್ದ ಕಾಸರಗೋಡು ಜಿಲ್ಲೆಯ ಚೆರ್ವತ್ತೂರು ನಿವಾಸಿ ಆದಿಲ್, ಕಡಪುರ ನಿವಾಸಿ ಇಸ್ಮಾಯಿಲ್, ಬೈಕ್ ನಲ್ಲಿ ಬಂದಿದ್ದ ಚೆರ್ವತ್ತೂರು ನಿವಾಸಿ ಹನೀನ್, ಬಸ್ ನಲ್ಲಿ ಬಂದಿದ್ದ ಚೆಂಗಳ ನಿವಾಸಿ ಅಬ್ದುಲ್ ತಮೀಮ್, ಮಂಗಳೂರಿನ ಪಡೀಲ್ ನಿವಾಸಿ ಮುಹಮ್ಮದ್ ಶರೀಫ್, ಕೇರಳ ಮಂಜೇಶ್ವ ನಿವಾಸಿ ಅಬುಬಕ್ಕರ್ ಬಂಧಿತರು.

- Advertisement -


ಬೇರೆಯವರ ಕೊರೊನಾ ನೆಗೆಟಿವ್ ವರದಿಯ ದಿನಾಂಕವನ್ನು ತಿದ್ದಿ ಹೊಸದಾಗಿ ವರದಿ ಪಡೆದಂತೆ ನಂಬಿಸಿ ಗಡಿ ಪ್ರವೇಶಿಸಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ವರದಿ ನಕಲಿ ಮಾಡಿ ಕೊಟ್ಟ ಕಾಸರಗೋಡು ಜಿಲ್ಲೆಯ ಕಬೀರ್ ಎ. ಎಂ. (24) ಎಂಬಾತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಗಳು ಬಳಸಿದ್ದ ಬೈಕ್ ಹಾಗು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಒಟ್ಟು ಪ್ರತ್ಯೇಕ ನಾಲ್ಕು ಪ್ರಕರಣ ದಾಖಲು ಮಾಡಿ ತನಿಖೆ ನಡೆಸಲಾಗುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಕುಮಾರ್ ಎನ್ ಮಾಹಿತಿ ನೀಡಿದ್ದಾರೆ.

- Advertisement -