ಶೆಹ್ಲಾ ರಶೀದ್ ವಿರುದ್ಧದ ಕಾರ್ಯಕ್ರಮ: ಝೀ ನ್ಯೂಸ್ ಮಾಜಿ ಆ್ಯಂಕರ್’ಗೆ ಸುಧೀರ್ ಚೌಧರಿಗೆ ಹೈಕೋರ್ಟ್ ನೋಟಿಸ್

Prasthutha|

ನವದೆಹಲಿ: ನವೆಂಬರ್ 2020ರಲ್ಲಿ ಝೀ ನ್ಯೂಸ್ ಸುದ್ದಿ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅದರ ಮಾಜಿ ನಿರೂಪಕ ಸುಧೀರ್ ಚೌಧರಿ ಅವರು ಬೇಷರತ್ ಆಗಿ ಕ್ಷಮೆಯಾಚಿಸುವಂತೆ ಕೋರಿ JNU ವಿಶ್ವವಿದ್ಯಾಲಯ ಮಾಜಿ ವಿದ್ಯಾರ್ಥಿ ಮುಖಂಡೆ ಶೆಹ್ಲಾ ರಶೀದ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ, ಝೀ ನ್ಯೂಸ್ ಮತ್ತು ಚೌಧರಿಗೆ ನೋಟಿಸ್ ಜಾರಿಗೊಳಿಸಿದೆ.

- Advertisement -

ಮಾರ್ಚ್ 31, 2022 ರಂದು ನ್ಯೂಸ್ ಬ್ರಾಡ್ ಕಾಸ್ಟರ್ಸ್ ಮತ್ತು ಡಿಜಿಟಲ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (ಎನ್ ಬಿಡಿಎಸ್ಎ) ಹೊರಡಿಸಿದ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿ ಶೆಹ್ಲಾ ರಶೀದ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು, ಎನ್ ಬಿಡಿಎಸ್ ಎ ಪ್ರಕರಣದ ಕುರಿತು ಪ್ರತಿಕ್ರಿಯಿಸಲು ಝೀ ನ್ಯೂ ಸುದ್ದಿ ವಾಹಿನಿಗೆ ಮತ್ತು ನಿರೂಪಕ ಸುಧೀರ್ ಚೌಧರಿ ಅವರಿಗೆ ಆರು ವಾರಗಳ ಕಾಲವಕಾಶವನ್ನು ನೀಡಿದೆ. ಮುಂದಿನ ವಿಚಾರಣೆಯನ್ನು ಫೆಬ್ರವರಿ 23, 2023ಕ್ಕೆ ನಿಗದಿಪಡಿಸಿದ್ದಾರೆ.

Join Whatsapp