ಬೆಂಗಳೂರು: ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ನಿಮಗೂ ನೋಟಿಸ್ ನೀಡಬೇಕಲ್ಲವೇ ಎಂದು ಕಾಂಗ್ರೆಸ್ ಅರಗ ಜ್ಞಾನೇಂದ್ರ ಅವರನ್ನು ಪ್ರಶ್ನಿಸಿದೆ.
ಕಾಂಗ್ರೆಸ್ –ಬಿಜೆಪಿ ನಾಯಕರ ಮಧ್ಯೆ ಪರಸ್ಪರ ವಾಗ್ದಾಳಿ, ಕೆಸರೆರಚಾಟ ಜೋರಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮವೇ ಆಗಿಲ್ಲವೆಂದು ಇಷ್ಟು ಆತ್ಮವಿಶ್ವಾಸದಿಂದ ಸದನದಲ್ಲಿ ಸಮರ್ಥಿಸಿದ ಆರಗ ಜ್ಞಾನೇಂದ್ರ ಅವರೇ, ಈ ಸಮರ್ಥನೆಗೂ, ದಿವ್ಯಾ ಹಾಗರಗಿ ಬಂಧನ ಆಗದಿರುವುದಕ್ಕೂ, ನೀವು ಅವರ ಆದರಾತಿಥ್ಯ ಸ್ವೀಕರಿಸಿದ್ದಕ್ಕೂ ಗಾಢಸಂಬಂಧ ಇದೆಯಲ್ಲವೇ ಎಂದು ಪ್ರಶ್ನಿಸಿದೆ.
‘ಪ್ರಕರಣಕ್ಕೆ ಸಂಬಂಧಿಸಿ ನಿಮ್ಮ ಸಮರ್ಥನೆಯನ್ನು ಬಾಲಿಶತನ ಎನ್ನೋಣವೇ?, ಸಿಐಡಿ ತನಿಖೆಗಾಗಿ ನಿಮಗೂ ನೋಟಿಸ್ ನೀಡಬೇಕಲ್ಲವೇ’ ಎಂದು ಕಾಂಗ್ರೆಸ್ ಬರೆದುಕೊಂಡಿದೆ.