ಮಾತ್ರೆ ತಿನ್ನದೇ ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ!

Prasthutha|

ನಮ್ಮ ಹೊಟ್ಟೆಯಲ್ಲಿ ಯಾವಾಗಲೂ 100 ರಿಂದ 150 ಮಿಲಿ ಗ್ಯಾಸ್ ಇರುತ್ತದೆ. ಈ ಗ್ಯಾಸ್ ಹೆಚ್ಚಾದರೆ ದೊಡ್ಡ ಸಮಸ್ಯೆಯಾಗುತ್ತದೆ. ಸಾಮಾನ್ಯವಾಗಿ ಎಲ್ಲರು ಕೂಡ ಗ್ಯಾಸ್ ಮತ್ತು ಹೊಟ್ಟೆ ಉಬ್ಬುವಿಕೆ ಸಮಸ್ಯೆಯನ್ನು ಅನುಭವಿಸಿರುತ್ತಾರೆ. ತಪ್ಪಾದ ಆಹಾರ ಪದ್ಧತಿಯನ್ನು ಅನುಸರಿಸುವುದು ಗ್ಯಾಸ್ ಮತ್ತು ವಾಯು ಸಮಸ್ಯೆಗೆ ಮುಖ್ಯ ಕಾರಣವಾಗಿದೆ.

- Advertisement -


ನಿಮ್ಮ ಹೊಟ್ಟೆಯಲ್ಲಿ ಸಾಕಷ್ಟು ನೀರು ಅಥವಾ ದ್ರವ ಇಲ್ಲದಿದ್ದರೆ, ಹೊಟ್ಟೆ ಉಬ್ಬುವಿಕೆ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ನಿಮ್ಮ ದೇಹದಲ್ಲಿ ನೀರಿನ ಕೊರತೆ ಇಲ್ಲದಂತೆ ನೋಡಿಕೊಳ್ಳಬೇಕು. ಹೊಟ್ಟೆಯಲ್ಲಿ ಸಾಕಷ್ಟು ನೀರು ಇಲ್ಲದಿದ್ದರೆ, ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ.


ಜೊತೆಗೆ ಗ್ಯಾಸ್ ಮತ್ತು ಹೊಟ್ಟೆ ಉಬ್ಬುವಿಕೆ ಸಮಸ್ಯೆಗಳು ಉಂಟಾಗುತ್ತವೆ. ಇದಕ್ಕಾಗಿ ರಸಭರಿತವಾದ ಹಣ್ಣುಗಳನ್ನು ನೀರಿನೊಂದಿಗೆ ಸೇವಿಸಿ. ಅಲ್ಲದೇ ನೀವು ಬೆಳಗ್ಗೆ ಎದ್ದ ನಂತರ 2 ಗ್ಲಾಸ್ ನೀರನ್ನು ಕುಡಿಯುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿ ಎಂದು ಡಾ. ವಿಲ್ ವೆಲ್ಸಿವಿಕ್ಜ್ ಹೇಳುತ್ತಾರೆ. ಪ್ರತಿ ಊಟದ ನಂತರ ಕನಿಷ್ಠ ಎರಡು ಲೋಟ ನೀರು ಕುಡಿಯಿರಿ.

- Advertisement -


ತಜ್ಞರ ಪ್ರಕಾರ ಜೀವನಶೈಲಿ ಹಾಗೂ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡರೆ ಈ ಸಮಸ್ಯೆಯಿಂದ ಹೊರಬರಬಹುದು. ಹೊಟ್ಟೆಯ ಗ್ಯಾಸ್ ಸಮಸ್ಯೆಯನ್ನು ಉಲ್ಬಣಗೊಳಿಸುವ ಧೂಮಪಾನ, ಕಾಫಿ ಕುಡಿತ ಮತ್ತು ಚಾಕೊಲೇಟ್ ಗಳನ್ನು ಅತಿಯಾಗಿ ತಿನ್ನುವುದನ್ನು ತಡೆಯಬೇಕು. ಕಡಿಮೆ ಕೊಬ್ಬು ಮತ್ತು ಹೆಚ್ಚಿನ ಫೈಬರ್ ಹೊಂದಿರುವ ಆಹಾರವನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ. ನಾರಿನಂಶ ಹೆಚ್ಚಿರುವ ಹಸಿರು ತರಕಾರಿ, ಹೂಕೋಸು, ಕೋಸುಗಡ್ಡೆ, ಸೌತೆಕಾಯಿಗಳನ್ನು ತಿನ್ನುವುದು ಜೀರ್ಣಕ್ರಿಯೆಗೆ ಒಳ್ಳೆಯದು ಎನ್ನುತ್ತಾರೆ.


ಇವುಗಳನ್ನು ಮಾಡಲೇಬೇಡಿ: ನಮ್ಮಲ್ಲಿ ಹೆಚ್ಚಿನವರು ಊಟ ಮಾಡಿದ ತಕ್ಷಣ ಮಲಗುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಇದರಿಂದ ಹೊಟ್ಟೆಯ ಗ್ಯಾಸ್ ಸಮಸ್ಯೆ ಉಲ್ಬಣಿಸುತ್ತದೆ. ತಿಂದ ತಕ್ಷಣ ಮಲಗಿದರೆ ಅರೆಬೆಂದ ಆಹಾರ ಬಾಯಿಗೆ ಬರುವ ಸಾಧ್ಯತೆ ಇದೆ. ಚಿಕನ್, ಮೀನಿನಂತಹ ಪದಾರ್ಥಗಳನ್ನು ಚೆನ್ನಾಗಿ ಬೇಯಿಸಿ ಸೇವಿಸುವುದು ಉತ್ತಮ ಎಂದು ವೈದ್ಯರು ಹೇಳುತ್ತಾರೆ.

ಜೀರಿಗೆ ಕಾಳುಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ತನ್ನಲ್ಲಿ ಅಗಾಧ ಪ್ರಮಾಣದಲ್ಲಿ ಔಷಧೀಯ ಗುಣಗಳನ್ನು ಒಳಗೊಂಡಿರುವ ಈ ಪುಟ್ಟ ಕಾಳುಗಳು, ಅಡುಗೆಯ ರುಚಿಯನ್ನು ಹೆಚ್ಚಿಸುವುದು ಮಾತ್ರ ವಲ್ಲದೆ, ಸಣ್ಣಪುಟ್ಟ ಕಾಯಿಲೆಯಿಂದ ಹಿಡಿದು, ಕರುಳಿನ ಕ್ಯಾನ್ಸರ್ ನಂತಹ ಕಾಯಿಲೆ ಕೂಡ, ನಮ್ಮ ಹತ್ತಿರಕ್ಕೆ ಸುಳಿಯದಂತೆ ನೋಡಿ ಕೊಳ್ಳುತ್ತದೆ.
ಇನ್ನು ಆಗಾಗ ಕಾಡುವ ಹೊಟ್ಟೆಯಲ್ಲಿಸೆಳೆತ, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ಟ್ರಿಕ್ ನಂತಹ ಸಮಸ್ಯೆಯನ್ನು ಕ್ಷಣಮಾತ್ರದಲ್ಲಿ ಜೀರಿಗೆ ಕಷಾಯ ಮಾಯ ಮಾಡುತ್ತದೆ.

ಒಂದು ಕಪ್ ಕುದಿಯುವ ನೀರಿಗೆ, ಒಂದು ಟೀ ಚಮಚದಷ್ಟು ಜೀರಿಗೆ ಯನ್ನು ಹಾಕಿ, ಆಮೇಲೆ ಇದಕ್ಕೆ ಸಣ್ಣ ತುಂಡು ಒಣ ಶುಂಠಿಯನ್ನು ಜಜ್ಜಿ ಹಾಕಿ ಸುಮಾರು ಹತ್ತು ನಿಮಿಷಗಳವರೆಗೆ ಕುದಿಯಲು ಬಿಡಿ. ಆ ಬಳಿಕ ಗ್ಯಾಸ್ ಸ್ಟೌವ್ ಆಫ್ ಮಾಡಿ, ಈ ಪಾನೀಯವನ್ನು ಇನ್ನೊಂದು ಪಾನೀ ಯಕ್ಕೆ ಸೋಸಿ ಕೊಂಡು, ತಣ್ಣಗಾದ ಬಳಿಕದಿನಕ್ಕೆ ಮೂರು ಬಾರಿ ಈ ನೀರನ್ನು ಕುಡಿಯಿರಿ .

ಆಗಾಗ ಏಲಕ್ಕಿ ತಿಂದರೆ ಗ್ಯಾಸ್ಟ್ರಿಕ್ ಆಗುವುದಿಲ್ಲ ಎಂದು ಹೇಳುತ್ತಾರೆ. ಇದರಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿದ್ದು ಸಕ್ಕರೆ ಪ್ರಮಾಣ ನಿಯಮಿತವಾಗಿದೆ. ಶುಗರ್ ಇರುವವರಿಗೂ ಒಳ್ಳೆಯದು.



Join Whatsapp