ಹಿಂದೂಗಳು ಅಪಾಯದಲ್ಲಿದ್ದಾರೆ ಎನ್ನುವ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕೆ?: ಕೀರ್ತಿ ಅಜಾದ್

Prasthutha|

ಕೋಲ್ಕತ್ತಾ: ಹತ್ತು ವರ್ಷಗಳ ಆಡಳಿತದ ನಂತರವೂ ಬಿಜೆಪಿ ಹಿಂದೂಗಳು ಅಪಾಯದಲ್ಲಿದ್ದಾರೆ ಎನ್ನುತ್ತಿದ್ದರೆ ಆ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕೆ ಎನ್ನುವ ಅನುಮಾನ ಮೂಡಿಸುತ್ತದೆ ಎಂದು ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಭಾರತದ ಮಾಜಿ ಕ್ರಿಕೆಟ್ ಆಟಗಾರ ಕೀರ್ತಿ ಆಜಾದ್ ಹೇಳಿದ್ದಾರೆ.

- Advertisement -

ಹಿಂದೆ ಬಿಜೆಪಿಯಲ್ಲಿದ್ದು ನಂತರ ಅದನ್ನು ತ್ಯಜಿಸಿ ಈಗ ಟಿಎಂಸಿಯ ಬರ್ಧಮಾನ್-ದುರ್ಗಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಅಜಾದ್ ಮಾಧ್ಯಮದ ಜೊತೆ ಮಾತನಾಡಿದರು.

ಮೊಘಲರ ಆಡಳಿತದಲ್ಲಿ ಹಿಂದೂಗಳಿಗೆ ಬೆದರಿಕೆ ಇರಲಿಲ್ಲ. ಬ್ರಿಟಿಷರ ಕಾಲದಲ್ಲಿಯೂ ಅವರಿಗೆ ಗಂಡಾಂತರ ಇರಲಿಲ್ಲ. ಸ್ವಾತಂತ್ರ್ಯಾನಂತರದ ವಿವಿಧ ಸರ್ಕಾರಗಳ ಆಳ್ವಿಕೆಯಲ್ಲಿಯೂ ಹಿಂದೂಗಳು ಯಾವುದೇ ಅಪಾಯ ಎದುರಿಸಲಿಲ್ಲ ಎಂದು ಕೀರ್ತಿ ಅಜಾದ್, ಆದರೆ ಹಿಂದುತ್ವ ರಕ್ಷಕ ಎಂದು ತನ್ನನು ಕರೆಸಿಕೊಂ ರಾಷ್ಟ್ರೀಯ ಪಕ್ಷ 10 ವರ್ಷಗಳಿಂದ ಆಡಳಿತ ನಡೆಸುತ್ತಿರುವಾಗ ಹಿಂದೂಗಳಿಗೆ ದಿಢೀರ್ ಅಪಾಯ ಎದುರಾಗಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.

- Advertisement -

ಬಿಜೆಪಿಗೆ ಹೇಳಿಕೊಳ್ಳುವಂಥ ಸಾಧನೆಗಳೇ ಇಲ್ಲದಿರುವುದರಿಂದ ಚುನಾವಣೆಯಲ್ಲಿ ಕೋಮುವಾದವನ್ನು ಉದ್ದೀಪಿಸುತ್ತಿದೆ. ಯುಸಿಸಿಯನ್ನು ಒಂದು ತಂತ್ರವನ್ನಾಗಿ ಬಳಸುತ್ತಿದೆ ಎಂದು ಹೇಳಿದರು.

ವಿಭಿನ್ನ ಸಮುದಾಯಗಳ, ಹಿನ್ನೆಲೆಯ ಮತ್ತು ಧರ್ಮಗಳ ಜನ ಇಲ್ಲಿದ್ದಾರೆ. ನೀವು ದೇಶದ ಯಾವುದೇ ಭಾಗಕ್ಕೆ ಹೋದರೂ ವಿಭಿನ್ನವಾಗಿ ಹಬ್ಬಗಳನ್ನು ಆಚರಿಸುವುದನ್ನು ನೋಡುವಿರಿ ಎಂದ ಅವರು, ಯುಸಿಸಿ ಜರ್ಮನಿಯಂಥ ಒಂದೇ ಜನಾಂಗ ಇರುವ ದೇಶಗಳಿಗೆ ಸೂಕ್ತ, ಭಾರತಕ್ಕಲ್ಲ ಎಂದು ಪ್ರತಿಪಾದಿಸಿದರು.



Join Whatsapp