ಸೂಚನಾ ಫಲಕ ಹಾಕದ ಅಂಗಡಿ ಹೊಟೇಲುಗಳಿಗೆ ದಂಡ

Prasthutha|

ಚಿಕ್ಕಮಗಳೂರು: ಸೂಚನಾ ಫಲಕ ಅಳವಡಿಸದ ಹೊಟೇಲು, ಅಂಗಡಿಗಳಿಗೆ ದಂಡ ವಿಧಿಸಿರುವ ಘಟನೆ ಕೊಟ್ಟಿಗೆಹಾರದಲ್ಲಿ ನಡೆದಿದೆ.

- Advertisement -

ಬಣಕಲ್ ಸಬ್ ಇನ್ಸ್ಪೆಕ್ಟರ್ ಗಾಯತ್ರಿ ಅವರು ದಂಡ ವಿಧಿಸುವ ಮೂಲಕ ಹೊಟೇಲು, ಅಂಗಡಿ ಮಾಲಿಕರಿಗೆ ಎಚ್ಚರಿಕೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಬ್ ಇನ್ ಸ್ಪೆಕ್ಟರ್ ಗಾಯತ್ರಿ,ಹೊಟೇಲುಗಳಲ್ಲಿ ಮತ್ತು ಅಂಗಡಿಗಳಲ್ಲಿ ಧೂಮಪಾನ ನಿಷೇಧ  ಸೂಚನಾ ಫಲಕ  ಕಡ್ಡಾಯವಾಗಿ  ಅಳವಡಿಸಬೇಕು.ಹೊಟೇಲುಗಳಲ್ಲಿ ಶೌಚಾಲಯ ವ್ಯವಸ್ಥೆ ಹಾಗೂ ಗ್ರಾಹಕರಿಗೆ ಕುಡಿಯಲು ಬಿಸಿ ನೀರು ನೀಡಬೇಕು. ಯಾವುದೇ ಹೊಟೇಲು ಅಂಗಡಿಗಳು ಈ ನಿಯಮಗಳನ್ನು ಪಾಲಿಸದಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದರು.

- Advertisement -

ಯಾವುದೇ ಅಂಗಡಿಗಳಲ್ಲಿ  ಬೀಡಿ ಸಿಗರೇಟು ತಂಬಾಕು  ಮಾರಾಟ ಮಾಡಬಾರದು.ಸಾರ್ವಜನಿಕರು ಧೂಮಪಾನ ಮಾಡುವುದನ್ನು ಅಂಗಡಿಯವರು ತಡೆಯಬೇಕು.ಆರೋಗ್ಯದ ಹಿತದೃಷ್ಟಿಯಿಂದ ಧೂಮಪಾನಕ್ಕೆ ಪ್ರೋತ್ಸಾಹ ನೀಡಬಾರದು.ಹೋಟೇಲುಗಳಲ್ಲಿ ಸಾರ್ವಜನಿಕವಾಗಿ ಮದ್ಯಪಾನಕ್ಕೆ ಅವಕಾಶ ನೀಡಬಾರದು. ಚರಂಡಿ ಮೇಲೆ ಅಂಗಡಿ ವಸ್ತುಗಳನ್ನು ಇಡುವುದನ್ನು ನಿಷೇಧಿಸಲಾಗಿದೆ.ಈ ಬಾರಿ ಪ್ರತಿ ಅಂಗಡಿಗಳಲ್ಲಿ ಸೂಚನಾ ಫಲಕ ಇಲ್ಲದೇ ಇರುವುದರಿಂದ ಹೊಟೇಲ್  ಅಂಗಡಿ ಮಾಲೀಕರಿಗೆ ರೂ100 ದಂಡ ವಿಧಿಸಲಾಗಿದೆ. ಮುಂದಿನ ದಿನಗಳಲ್ಲಿ ನಿಯಮ ಪಾಲಿಸದಿದ್ದರೆ ಮಾಲಿಕರು ಹೆಚ್ಚಿನ ದಂಡವನ್ನು ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹೆಡ್ ಕಾನ್ ಸ್ಟೇಬಲ್ ನಂದೀಶ್ ಜೊತೆಗಿದ್ದರು.

Join Whatsapp