ಅಮೆರಿಕ: ಶಾಲೆಯಲ್ಲಿ ಗುಂಡಿನ ದಾಳಿ| ಇಬ್ಬರು ವಿದ್ಯಾರ್ಥಿಗಳು ಮೃತ್ಯು

Prasthutha|

ಇಯೊವಾ: ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟು, ಶಿಕ್ಷಕಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಅಮೆರಿಕದ ಇಯೊವಾ(Iowa) ನಗರದ ಶಾಲೆಯಲ್ಲಿ ನಡೆದಿದೆ.

ಘಟನೆಯ ನಂತರ ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿ ಆಧರಿಸಿ ಕಾರೊಂದನ್ನು ತಡೆದು ನಿಲ್ಲಿಸಿದ ಪೊಲೀಸರು ಮೂವರು ಸಂಭಾವ್ಯ ಶಂಕಿತರನ್ನು ವಶಕ್ಕೆ ತೆಗೆದುಕೊಂಡರು. ಗುಂಡುಹಾರಾಟಕ್ಕೆ ಕಾರಣವೇನೆಂಬುದರ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಪೊಲೀಸರು ಬಿಡುಗಡೆ ಮಾಡಿಲ್ಲ.

- Advertisement -

‘ಘಟನೆಯಲ್ಲಿ ಮೃತಪಟ್ಟ ಇಬ್ಬರು ವಿದ್ಯಾರ್ಥಿಗಳಾಗಿದ್ದಾರೆ. ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸ್ ಇಲಾಖೆಯ ವಕ್ತಾರ ಡೆಸ್ ಮೊಯಿನ್ಸ್​ ಹೇಳಿದ್ದಾರೆ.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಶನಿವಾರ ಸಂಜೆಯಷ್ಟೇ ಗುಂಡಿನ ದಾಳಿ ನಡೆದು 11 ಮಂದಿ ಮೃತಪಟ್ಟಿದ್ದರು. ಘಟನೆಯ ಸಂಬಂಧ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲು ಯತ್ನಿಸಿದ್ದರು. ಆದರೆ ಅವನು ಸ್ವತಃ ಗುಂಡುಹಾರಿಸಿಕೊಂಡು ಮೃತಪಟ್ಟಿದ್ದ.

- Advertisement -