ಪ್ರಕ್ಷುಬ್ಧ ಶ್ರೀಲಂಕಾ | ಗಲಭೆ ನಿಯಂತ್ರಿಸಲು ಕಂಡಲ್ಲಿ ಗುಂಡಿಕ್ಕಲು ಆದೇಶ

Prasthutha|

ಕೊಲಂಬೊ: ಮಾರಣಾಂತಿಕ ಹಿಂಸಾಚಾರ ಮತ್ತು ಗಲಭೆಯಿಂದ ಪ್ರಕ್ಷುಬ್ದಗೊಂಡ ಶ್ರೀಲಂಕಾ, ಇದೀಗ ಮತ್ತಷ್ಟು ಅಶಾಂತಿ ಮತ್ತು ಗಲಭೆಯನ್ನು ನಿಯಂತ್ರಿಸಲು ಶ್ರೀಲಂಕಾ ಅಧಿಕಾರಿಗಳು ಕಂಡಲ್ಲಿ ಗುಂಡಿಕ್ಕಲು ಆದೇಶ ನೀಡಿದ್ದಾರೆ.

- Advertisement -

ಸಾವಿರಾರು ಭದ್ರತಾ ಪಡೆಗಳು ಕರ್ಫ್ಯೂ ಜಾರಿಗೊಳಿಸಿದ ಹೊರತಾಗಿಯೂ ಸಾರ್ವಜನಿಕ ಆಸ್ತಿಯನ್ನು ಲೂಟಿ ಮಾಡುವ ಅಥವಾ ಜೀವಕ್ಕೆ ಹಾನಿಯನ್ನುಂಟು ಮಾಡುವ ಯಾರನ್ನಾದರೂ ಕಂಡಲ್ಲಿ ಗುಂಡುಕ್ಕುವಂತೆ ಆದೇಶ ನೀಡಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಸದ್ಯ ಕೊಲಂಬೊದಲ್ಲಿ ಭೀಕರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಧ್ಯಕ್ಷ ಗೋತಬಯ ರಾಜಪಕ್ಷೆ ರಾಜೀನಾಮೆಗೆ ಆಗ್ರಹಿಸಿ ವಾರಗಳವರೆಗೆ ಶಾಂತಿಯುತವಾಗಿ ಪ್ರತಿಭಟಿಸಿದವರ ಮೇಲೆ ಸರ್ಕಾರದ ಪರ ಹೋರಾಟಗಾರರು ಲಾಠಿ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದರು.

- Advertisement -

ಇದರಿಂದ ಕೆರಳಿದ ಪ್ರತಿಭಟನಾಕಾರರು ತಡರಾತ್ರಿವರೆಗೂ ದೇಶಾದ್ಯಂತ ಪ್ರತಿಕಾರ ನಡೆಸಿತ್ತು. ಆಡಳಿತ ಪಕ್ಷದ ಜನಪ್ರತಿನಿಧಿಗಳ ಹಲವಾರು ಮನೆಗಳನ್ನು ಸುಟ್ಟು ಹಾಕಲಾಯಿತು ಮತ್ತು ರಾಜಧಾನಿಯಲ್ಲಿ ಪ್ರಧಾನ ಮಂತ್ರಿಯ ಅಧಿಕೃತ ನಿವಾಸಕ್ಕೆ ನುಗ್ಗಲು ಯತ್ನಿಸಲಾಗಿತ್ತು.

ಮಂಗಳವಾರ ನಡೆದ ಘಟನೆಯಲ್ಲಿ ಸುಮಾರು ಎಂಟು ಮಂದಿ ಸಾವನ್ನಪ್ಪಿದ್ದು, ಕರ್ಫ್ಯೂ ಮಧ್ಯೆ ಪ್ರತಿಭಟನೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲಂಬೊದ ಹಿರಿಯ ಪೊಲೀಸ್ ಸಿಬ್ಬಂದಿಯನ್ನು ಕೊಂಡೊಯ್ಯುತ್ತಿದ್ದ ವಾಹನದ ಮೇಲೆ ಗುಂಪೊಂದು ದಾಳಿ ಮಾಡಿ ಬೆಂಕಿ ಹಚ್ಚಿದೆ ಎಂದು ತಿಳಿದು ಬಂದಿದೆ.

Join Whatsapp