ಏರ್’ಟೆಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ತಿಂಗಳ ಕನಿಷ್ಠ ರಿಚಾರ್ಜ್ ಮತ್ತಷ್ಟು ದುಬಾರಿ

Prasthutha|

ನವದೆಹಲಿ: ದೇಶದ ಪ್ರಮುಖ ಖಾಸಗಿ ಟೆಲಿಕಾಂ ಸಂಸ್ಥೆಯಾದ ಭಾರತಿ ಏರ್’ಟೆಲ್ 28 ದಿನಗಳ ರಿಚಾರ್ಜ್ ದರದಲ್ಲಿ ಭಾರಿ ಪರಿಷ್ಕರಣೆ ತಂದಿದ್ದು, ಗ್ರಾಹಕರಿಗೆ ಶಾಕ್ ನೀಡಿದೆ.

- Advertisement -

28 ದಿನಗಳ ರಿಚಾರ್ಜ್ ಪ್ಯಾಕ್’ನಲ್ಲಿ ಕನಿಷ್ಠ ಆರಂಭಿಕ ದರ ರೂ. 99 ರಿಂದ 155 ರೂ.ಗೆ ಏರಿಸಿದೆ. ಈ ಮೊದಲು ಏರ್’ಟೆಲ್ ತನ್ನ ಗ್ರಾಹಕರಿಗೆ 99 ರೂ.ಗೆ 200 ಮೆಗಾಬೈಟ್ ಇಂಟರ್’ನೆಟ್ ಡಾಟಾ ಮತ್ತು ಅನಿಯಮಿತ ಕರೆಗಳ ಸೇವೆಯನ್ನು ಒದಗಿಸುತ್ತಿದ್ದರೆ, ಇದೀಗ ತನ್ನ ದರದಲ್ಲಿ ಬದಲಾವಣೆ ಮಾಡಿರುವ ಸಂಸ್ಥೆ ಅದೇ ದರವನ್ನು 155 ರೂ.ಗೆ ಏರಿಸಿದೆ. ಈ ಪ್ಯಾಕೆಜ್’ನಲ್ಲಿ 1 ಜಿಬಿ ಇಂಟರ್ನೆಟ್ ಡೇಟಾ ಮತ್ತು 300 ಎಸ್.ಎಮ್. ಎಸ್ ಸೇವೆ ಕೂಡ ಸಿಗಲಿದೆ.

ಸದ್ಯ ಈ ಯೋಜನೆ ಹರ್ಯಾಣ ಮತ್ತು ಒರಿಸ್ಸಾದಲ್ಲಿ ಜಾರಿಗೆ ಮುಂದಾಗಿದ್ದು, ಇನ್ನು ಮುಂದಕ್ಕೆ ದೇಶದಾದ್ಯಂತ ಜಾರಿಯಾಗುವ ಸಾಧ್ಯತೆಯಿದೆ.



Join Whatsapp