ಭೋಪಾಲ್ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಪಕ್ಷಕ್ಕೆ ಅಧಿಕಾರವನ್ನು ಮರಳಿ ಪಡೆಯುವುದರ ಜೊತೆಗೆ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಬುಧ್ನಿ ವಿಧಾನಸಭಾ ಕ್ಷೇತ್ರದಲ್ಲಿ ಸತತ 6 ನೇ ಬಾರಿ ಗೆದ್ದಿರುವ ಶಿವರಾಜ್ ಸಿಂಗ್ ಚೌವ್ಹಾಣ್ ವಿಕ್ರಮ್ ಮಸ್ತಾಲ್ ವಿರುದ್ಧ 1 ಲಕ್ಷದ 4 ಸಾವಿರದ 974 ಮತಗಳಿಂದ ವಿಜಯಿಯಾಗಿದ್ದಾರೆ.
ಅಧಿಕಾರ ಉಳಿಸಿ ಮಧ್ಯಪ್ರದೇಶದ ದೀರ್ಘಾವಧಿಯ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚೌವ್ಹಾಣ್, 1990 ರಲ್ಲಿ ಮೊದಲ ಬಾರಿಗೆ ಬುಧ್ನಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಅವರು 1991, 1996, 1998, 1999, 2004 ರಲ್ಲಿ ವಿದಿಶಾ ಕ್ಷೇತ್ರದ ಸಂಸದರಾಗಿಯೂ ಆಯ್ಕೆಗೊಂಡಿದ್ದರು.
ಬೆಂಬಲಿಗರಿಂದ ಪ್ರೀತಿಯಿಂದ ‘ಮಾಮಾ’ ಎಂದು ಕರೆಸಿಕೊಳ್ಳುವ ಈ ಬಾರಿ ಸಿಎಂ ಆಗಿ ಮುಂದುವರೆಯುತ್ತಾರಾ ಎಂದು ದೃಢವಾಗಿಲ್ಲ. ಚೌವ್ಹಾಣ್ ಅವರನ್ನು ಈ ಬಾರಿ ಪಕ್ಷದ ಮುಖ್ಯಮಂತ್ರಿಯಾಗಿ ಬಿಂಬಿಸಲಾಗಿರಲಿಲ್ಲ.
ಶಿವರಾಜ್ ಸಿಂಗ್ ಚೌಹಾಣ್ ಬಿಜೆಪಿ ಅಭ್ಯರ್ಥಿಗಳ ಪರ ಎಲ್ಲೆಡೆ ಪ್ರಚಾರ ಮಾಡಿದ್ದಾರೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಕೀರ್ತಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಸಲ್ಲುತ್ತದೆ.