ಮುಂಬೈ: ಶಿವಸೇನಾ ಮತ್ತು ಬಿಜೆಪಿ ಪಕ್ಷಗಳ ನಡುವೆ ಇರುವ ಸಂಬಂಧ ಭಾರತ–ಪಾಕಿಸ್ತಾನದಂತೆ ಅಲ್ಲ, ಆಮಿರ್ ಖಾನ್ ಮತ್ತು ಕಿರಣ್ ರಾವ್ ಅವರಂತೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಶಿವಸೇನಾ ಮತ್ತು ಬಿಜೆಪಿ ರಾಜಕೀಯವಾಗಿ ಭಿನ್ನವಾಗಿದ್ದರೂ ನಮ್ಮೊಳಗಿನ ಸ್ನೇಹಕ್ಕೆ ತೊಡಕಾಗುವುದಿಲ್ಲ ಎಂದು ಸಂಜಯ್ ರಾವತ್ ಹೇಳಿರುವುದಾಗಿ ಎಎನ್ಐ ಟ್ವೀಟಿಸಿದೆ.
‘ಶಿವಸೇನಾ ಮತ್ತು ಬಿಜೆಪಿ ಪಕ್ಷಗಳು ಶತ್ರುಗಳಲ್ಲ’ ಎಂದು ಮಹಾರಾಷ್ಟ್ರದ ವಿಧಾನಸಭೆ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವಿಸ್ ಭಾನುವಾರ ಹೇಳಿದ್ದರು. ಇದು ಮಹಾರಾಷ್ಟ್ರದ ರಾಜಕಾರಣದಲ್ಲಿ ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿದ್ದು, ಈ ಹೇಳಿಕೆಗೆ ರಾವತ್ ಸೋಮವಾರ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಸ್ನೇಹಿತರು (ಶಿವಸೇನಾ) ನಮ್ಮೊಂದಿಗೆ ಸೇರಿ 2019ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಚುನಾವಣೆಯ ನಂತರ, ನಾವು ವಿರೋಧಿಸಿದ್ದ ಜನರೊಂದಿಗೆ (ಎನ್‌ಸಿಪಿ, ಕಾಂಗ್ರೆಸ್) ಅವರು(ಶಿವಸೇನಾ) ಕೈಜೋಡಿಸಿದರು’ ಎಂದು ಫಡ್ನವಿಸ್ ಹೇಳಿಕೆ ನೀಡಿದ್ದಾರೆ.