ಶಿರಸಿ: ನಾನೂ ನಾಲ್ಕು ದಶಕದಿಂದ ರಾಜಕಾರಣದಲ್ಲಿ ಇದ್ದೇನೆ. ಯಾವುದು ಕಲ್ಪಿತ, ಯಾವುದು ಕಪೋಲ ಕಲ್ಪಿತ ಎಲ್ಲವನ್ನೂ ಹೇಳುವೆ ಎಂದು ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಮಂಗಳವಾರ ಅವರು ನಗರದಲ್ಲಿ ಸುದ್ದಿಗಾರರ ಜೊತೆ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಗೋ ಬ್ಯಾಕ್ ಸ್ಟಿಕ್ಕರ್ ಹಚ್ಚಿದ ಕುರಿತು ಪ್ರತಿಕ್ರಿಯೆ ನೀಡಿದರು.
ಯಾವ ಯಾವ ಕಾಲದಲ್ಲಿ ಯಾರ್ ಯಾರ್ ಅಂತರ ಕಾಯ್ಕೊಂಡಿದಾರೆ ಎಲ್ಲ ಹೇಳುವೆ. ಸ್ಟಿಕ್ಕರ್ ಹಚ್ಚಿದವರು ಯಾರು ಎಲ್ಲ ಮಾಹಿತಿ ಇದೆ. ಅವರಿಗೆ ಆತ್ಮತೃಪ್ತಿ ಆದರೆ ಸಾಕು ಎಂದು ಲೇವಡಿ ಮಾಡಿದರು.
ನಾನು ಎಲ್ಲೂ ಕಾಂಗ್ರೆಸ್ ಹೋಕ್ತೇನೆ ಹೇಳಿಲ್ಲ. ಹೋಗುವುದಿದ್ದರೆ ಎಲ್ಲ ಹೇಳಿಯೇ ಹೋಗುವೆ. ಇಷ್ಟು ವರ್ಷದ ರಾಜಕಾರಣದಲ್ಲಿ ಯಾವುದಕ್ಕೂ ಹೆದರಿಲ್ಲ. ಯಾರೂ ಯಾವುದೇ ಪಕ್ಷಕ್ಕೆ ಗುತ್ತಿಗೆಯಲ್ಲ. ಎಷ್ಟು ಬದಲಾವಣೆ ಆಗಿದೆ, ಆಗಿದ್ದಾರೆ ಗೊತ್ತಿಲ್ಲವಾ? ಎಂದರು.
ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿ ಎರಡು ಸಭೆ ಶಿರಸಿಯಲ್ಲಿ ನಡೆಸಿದ್ದರು. ನಾನು ಬೆಂಗಳೂರಿನಲ್ಲಿದ್ದೆ. ನಂತರ ಮಾಹಿತಿ, ಅಭಿಪ್ರಾಯ ಕೇಳಿಲ್ಲ ಎಂದರು.