‘ಜೈಲರ್’ ಚಿತ್ರದ ಮೂಲಕ ಪರಭಾಷಿಗರಿಗೂ ಹತ್ತಿರವಾದ ಶಿವರಾಜ್ ಕುಮಾರ್: ಶಿವಣ್ಣ ಖದರ್’ಗೆ ಭರಪೂರ ಮೆಚ್ಚುಗೆ

Prasthutha|

ನವದೆಹಲಿ: ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರು ಮಂಡ್ಯದ ಡಾನ್ ಆಗಿ ಮಿಂಚಿದ್ದಾರೆ. ಅವರ ಸ್ಕ್ರೀನ್ ಪ್ರೆಸೆನ್ಸ್ ಬಗ್ಗೆ ಭರಪೂರ ಮೆಚ್ಚುಗೆ ಸಿಗುತ್ತಿದೆ. ಕೆಲವೇ ನಿಮಿಷ ತೆರೆಮೇಲೆ ಕಾಣಿಸಿಕೊಂಡರೂ ಅವರ ನಟನೆಗೆ ಎಲ್ಲರ ಗಮನ ಸೆಳೆದಿದೆ. ಪರಭಾಷಿಗರು ಶಿವಣ್ಣ ಅವರನ್ನು ಹಾಡಿ ಹೊಗಳುತ್ತಿದ್ದಾರೆ.

- Advertisement -

ನಾನು ಇದುವರೆಗೆ ಶಿವರಾಜ್ ಕುಮಾರ್ ಅವರ ಯಾವುದೇ ಚಿತ್ರವನ್ನು ನೋಡಿಲ್ಲ, ಆದರೆ, ಜೈಲರ್ನಲ್ಲಿ ಅವರು ಕಣ್ಣಿನ ಮೂಲಕ ನೀಡುವ ರಿಯಾಕ್ಷನ್ ನೋಡಿದ ಮೇಲೆ ಇವರೊಳಗಿನ ನಟನ ದೈತ್ಯ ಪ್ರತಿಭೆ ಅರಿವಾಗಿದೆ, ಇವರ ಎಲ್ಲಾ ಸಿನೆಮಾಗಳನ್ನು ನೋಡಬೇಕು ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.


ಇನ್ನು ಕೆಲವರು ಶಿವರಾಜ್‌ಕುಮಾರ್ ಅವರು ತಮಿಳಿನಲ್ಲಿ ಪೂರ್ಣ ಪ್ರಮಾಣದ ಮಾಸ್ ಸಿನೆಮಾ ಮಾಡಬಬೇಕೆಂದು ಆಗ್ರಹ ವ್ಯಕ್ತಪಡಿಸಿದ್ದರೆ, ವೆಟ್ರಿಮಾರನ್ ಚಿತ್ರದಲ್ಲಿ ಶಿವರಾಜ್‌ಕುಮಾರ್ ಅಭಿನಯಿಸುವುದನ್ನು ನೋಡಬೇಕು ಎಂದು ಇನ್ನೊಬ್ಬರು ಆಸೆ ವ್ಯಕ್ತಪಡಿಸಿದ್ದಾರೆ.

Join Whatsapp