ಸಿಎಂ ಕುರ್ಚಿಗಾಗಿ ಶಿವಕುಮಾರ್ ದುಡುಕುವುದು ಬೇಡ: ವಿ ಸೋಮಣ್ಣ

Prasthutha|

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವ ಅಸೆಗಾಗಿ ದುಡುಕುವುದು ಬೇಡ, ಆತುರದಲ್ಲಿ ನಿರ್ಣಯಗಳನ್ನು ತೆಗೆದುಕೊಂಡರೆ ಉಲ್ಟಾ ಹೊಡೆಯುವ ಸಾಧ್ಯತೆಗಳಿರುತ್ತವೆ ಎಂದು ಹಿರಿಯ ಬಿಜೆಪಿ ನಾಯಕ ಮತ್ತು ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿ ಸೋಮಣ್ಣ ಹೇಳಿದ್ದಾರೆ.

- Advertisement -


ಬುಧವಾರ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಡಿಕೆಶಿ ಎಲ್ಲ ಕುರ್ಚಿಗಳ ಮೇಲೆ ಕೂತಾಗಿದೆ, ಒಂದು ಮಾತ್ರ ಬಾಕಿಯಿದೆ, ಅವರು ಸಿಎಂ ಆಗಲಿ ಅಂತ ನಾನೂ ಅಂದುಕೊಂಡಿದ್ದೆ ಅದರೆ ಅದನ್ನು ಪಡೆಯಲು ದುಡುಕುವುದು ಬೇಡ ಎಂದರು.

ಪ್ರಜ್ವಲ್ ಅವರ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೊಮ್ಮಗನಾಗಿರುವ ಕಾರಣಕ್ಕೆ ರಿಯಾಯಿತಿ ತೋರುವ ಅವಶ್ಯಕತೆ ಇಲ್ಲ, ತಪ್ಪು ಮಾಡಿದ್ದರೆ ಶಿಕ್ಷೆಯಾಗಲೇಬೇಕು ಎಂದು ಸೋಮಣ್ಣ ಹೇಳಿದರು.



Join Whatsapp