ಮೋದಿ ಉದ್ಘಾಟಿಸಿದ್ದ ಶಿವಾಜಿ ಪ್ರತಿಮೆ 1 ವರ್ಷ ಪೂರ್ಣಗೊಳ್ಳುವ ಮುನ್ನವೇ ಕುಸಿತ!

Prasthutha|

►ವಿಪಕ್ಷಗಳಿಂದ ತೀವ್ರ ತರಾಟೆ

- Advertisement -

ಮುಂಬೈ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ರಾಜ್‌ಕೋಟ್ ಕೋಟೆಯಲ್ಲಿ ಕಳೆದ ವರ್ಷ ಪ್ರಧಾನಿ ಮೋದಿ ಅನಾವರಣಗೊಳಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸೋಮವಾರ (ಆ.26) ಕುಸಿದು ಬಿದ್ದಿದೆ.

2023ರ ಡಿಸೆಂಬರ್‌ 4ರಂದು ಭಾರತೀಯ ನೌಕಾಪಡೆಯ ದಿನಾಚರಣೆ ವೇಳೆ ಪ್ರಧಾನಿ ಮೋದಿ ಈ ಭವ್ಯ ಪ್ರತಿಮೆಯನ್ನು ಮೋದಿ ಅನಾವರಣಗೊಳಿಸಿದ್ದರು.

- Advertisement -

ಮಾಲ್ವಾನ್‌ನ ರಾಜ್‌ ಕೋಟ್ ಕೋಟೆಯಲ್ಲಿ ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮರಾಠ ರಾಜನ 35 ಅಡಿ ಉದ್ದದ ಪ್ರತಿಮೆ ಕುಸಿದಿದುಬಿದ್ದಿದೆ. ಪೊಲೀಸ್ ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.

ವಿಪಕ್ಷಗಳಿಂದ ತರಾಟೆ
ಪ್ರತಿಮೆ ಧ್ವಂಸಗೊಂಡ ಬೆನ್ನಲ್ಲೇ‌ ಮಹಾರಾಷ್ಟ್ರ ರಾಜ್ಯ ಸರ್ಕಾರವನ್ನು ವಿಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ. ಘಟನೆಯ ನಂತರ, ಎನ್‌ಸಿಪಿ (ಎಸ್‌ಪಿ) ಯ ಜಯಂತ್ ಪಾಟೀಲ್, ಶಿವಸೇನಾ (UBT) ಯ ಆದಿತ್ಯ ಠಾಕ್ರೆ ಮತ್ತು ಇತರರು ಸೇರಿದಂತೆ ವಿರೋಧ ಪಕ್ಷಗಳ ನಾಯಕರು ರಾಜ್ಯ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ, ಇದು ಕಳಪೆ ಗುಣಮಟ್ಟದ ಕೆಲಸ ಎಂದು ಆರೋಪಿಸಿದ್ದಾರೆ.

ನಮ್ಮ ಮಹಾರಾಷ್ಟ್ರದ ಆರಾಧ್ಯ ದೈವವಾದ ಛತ್ರಪತಿ ಶಿವಾಜಿ ಮಹಾರಾಜರಿಗೆ ಆದ ಅವಮಾನವನ್ನು ನಾವು ಎಂದಿಗೂ ಸಹಿಸುವುದಿಲ್ಲ. ಚುನಾವಣೆ ಗೆಲ್ಲಲು ಮೋದಿ ಅವರಿಗೆ ಶಿವಾಜಿ ಮಹಾರಾಜರ ಮುಖ ಬೇಕಿತ್ತು. ಅದಕ್ಕಾಗಿ ತರಾತುರಿಯಲ್ಲಿ ಪ್ರತಿಮೆ ಅನಾವರಣಗೊಳಿಸಿದ್ದರು. ಅವರ ದುರಹಂಕಾರದಿಂದಲೇ ಇಂದು ಪ್ರತಿಮೆ ಧ್ವಂಸವಾಗಿದೆ ಎಂದು ಟೀಕಿಸಿದ್ದಾರೆ.



Join Whatsapp