‘ಆಜಾದಿ ಕಾ ಅಮೃತ ಮಹೋತ್ಸವ’ ಪೋಸ್ಟರ್ ನಲ್ಲಿ ನೆಹರೂ, ಆಝಾದ್ ಗೆ ಸಿಗದ ಸ್ಥಾನ | ಶಿವಸೇನಾ ಸಂಸದ ಸಂಜಯ್ ರಾವತ್ ಕಿಡಿ

Prasthutha|

ಮುಂಬೈ: ‘ಆಜಾದಿ ಕಾ ಅಮೃತ ಮಹೋತ್ಸವ’ಪೋಸ್ಟರ್ ನಲ್ಲಿ ಮಾಜಿ ಪ್ರಧಾನಿ ಜವಹರಲಾಲ್ ನೆಹರೂ ಭಾವಚಿತ್ರವನ್ನು ಪ್ರಕಟಿಸದಿರುವುದರ ಕುರಿತು ಶಿವಸೇನಾ ಸಂಸದ ಸಂಜಯ್ ರಾವತ್ ಕಿಡಿಕಾರಿದ್ದಾರೆ. ಇದು ಕೇಂದ್ರ ಸರಕಾರದ ‘ಸಂಕುಚಿತ ಮನೋಭಾವ’ಎಂದಿರುವ ಅವರು, ಕೇಂದ್ರ ಸರಕಾರಕ್ಕೆ ನೆಹರೂ ಮೇಲೆ ಇಷ್ಟೊಂದು ದ್ವೇಷ ಯಾಕೆ ? ಎಂದು ಪ್ರಶ್ನಿಸಿದ್ದಾರೆ.

- Advertisement -

ಕೇಂದ್ರ ಶಿಕ್ಷಣ ಸಚಿವಾಲಯದಡಿ ಬರುವ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ (ICHR) ಈ ಪೋಸ್ಟರ್ ಅನ್ನು ಬಿಡುಡೆಗೊಳಿಸಿದ್ದು, ಅದರಲ್ಲಿ ಭಾರತದ ಮೊಟ್ಟ ಮೊದಲ ಶಿಕ್ಷಣ ಸಚಿವ ಮೌಲಾನ ಅಬುಲ್ ಕಲಾಂ ಆಝಾದ್ ಹಾಗೂ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಭಾವಚಿತ್ರವನ್ನು ಕೈಬಿಟ್ಟಿರುವುದಕ್ಕೆ ರಾವತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶಿವಸೇನಾ ಮುಖವಾಣಿ ‘ಸಾಮ್ನಾ’ ದಲ್ಲಿ ರಾವತ್ ತನ್ನ ‘ರೋಕ್ತಕ್’ವಾರದ ಅಂಕಣದಲ್ಲಿ ಇದೊಂದು ‘ರಾಜಕೀಯ ಪ್ರತೀಕಾರ’ಎಂದು ಕರೆದಿದ್ದಾರೆ. ಅಲ್ಲದೇ, ಇದು ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರನಿಗೆ ಮಾಡಿದ ಅವಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

ಸ್ವಾತಂತ್ರ್ಯ ನಂತರದಲ್ಲಿ ನೆಹರೂ ತತ್ವಗಳಲ್ಲಿ ಭಿನ್ನತೆ ಇರಬಹುದು. ಆದರೆ ಅವರು ದೇಶಕ್ಕೆ ನೀಡಿದ ಕೊಡುಗೆಗಳನ್ನು ಮರೆಯುವಂತಿಲ್ಲ. ಅವರು ಹಾಕಿಕೊಟ್ಟ ಆರ್ಥಿಕ ಬುನಾದಿ ಮೇಲೆ ದೇಶ ಈಗಲೂ ಮುನ್ನಡೆಯುತ್ತಿದೆ. ಕೇಂದ್ರದ ಇತ್ತೀಚಿನ ಯೋಜನೆಗಳು ಕೂಡಾ ನೆಹರೂ ಅವರ ದೂರದೃಷ್ಟಿಯ ಯೋಜನೆಗಳಾಗಿವೆ ಎಂದು ತಿಳಿಸಿದ್ದಾರೆ.

ಇದೇ ಅಂಕಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಅವರನ್ನು ಶ್ಲಾಘಿಸಿರುವ ರಾವತ್, ಶಾಲೆಯ ಬ್ಯಾಗ್ ಗಳಲ್ಲಿದ್ದ ಮಾಜಿ ಮುಖ್ಯಮಂತ್ರಿಗಳಾದ ಜಯಲಲಿತಾ, ಪಳನಿಸ್ವಾಮಿ ಫೋಟೊ ತೆಗೆಯದಿರಲು ನಿರ್ಧರಿಸಿರುವ ಅವರು “ರಾಜಕೀಯ ಪ್ರಬುದ್ಧತೆ ಮೆರೆಯಬೇಕಾದರೆ, ನೀವ್ಯಾಕೆ ದ್ವೇಷ ರಾಜಕಾರಣದಲ್ಲಿ ತೊಡಗಿದ್ದೀರಿ ಎಂದು ಕುಟುಕಿದ್ದಾರೆ.

Join Whatsapp