ಸಂಸತ್ತಿನ ಶಿವಸೇನೆ ಕಚೇರಿ ಶಿಂಧೆ ಬಣಕ್ಕೆ

Prasthutha|

ನವದೆಹಲಿ: ಸಂಸತ್ತಿನಲ್ಲಿರುವ ಶಿವಸೇನೆ ಕಚೇರಿಯನ್ನು ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ಲೋಕಸಭೆಯ ಸೆಕ್ರೆಟರಿಯೇಟ್ ಹಂಚಿಕೆ ಮಾಡಿದೆ.

- Advertisement -


ಆ ಮೂಲಕ ಪಕ್ಷದ ಚಿಹ್ನೆ ಮತ್ತು ಹೆಸರು ಕಳೆದುಕೊಂಡಿದ್ದ ಉದ್ದವ್ ಠಾಕ್ರೆ ಬಣಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ.


ಶಿಂಧೆ ಬಣದ ಫ್ಲೋರ್ ಲೀಡರ್ ರಾಹುಲ್ ಶೆವಾಲೆ ಬರೆದ ಪತ್ರಕ್ಕೆ ಲೋಕಸಭೆಯ ಕಾರ್ಯದರ್ಶಿ ಪ್ರತಿಕ್ರಿಯೆ ನೀಡಿದ್ದು, ಪಕ್ಷಕ್ಕೆ ಕೊಠಡಿ ಹಂಚಿಕೆ ಮಾಡಿರುವ ವಿಚಾರವನ್ನು ತಿಳಿಸಿದ್ದಾರೆ.

Join Whatsapp