ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಕೇಂದ್ರದಿಂದ ಏಜೆನ್ಸಿಗಳ ದುರ್ಬಳಕೆ: ಶಿವಸೇನೆ ಆರೋಪ

Prasthutha|

ಮುಂಬೈ: ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಕೇಂದ್ರ ಸರ್ಕಾರವು ಕೇಂದ್ರ ಏಜೆನ್ಸಿಗಳಾದ ಸಿಬಿಐ ಮತ್ತು ಈಡಿಯನ್ನು ದುರ್ಬಳಕೆ ಮಾಡುತ್ತಿದ್ದು, ಬಿಜೆಪಿಯಲ್ಲದ ಇತರ ವಿರೋಧ ಪಕ್ಷಗಳನ್ನು ಮೌನಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಶಿವಸೇನೆ ಆರೋಪಿಸಿದೆ.

- Advertisement -


ಬ್ರಿಟಿಷರ ಆಳ್ವಿಕೆಯಲ್ಲಿಯೂ ಜನರು ಇಷ್ಟೊಂದು ಹೆದರುತ್ತಿರಲಿಲ್ಲ. ಈಗ ಸಿಬಿಐ ಮತ್ತು ಈಡಿ ಶ್ರೀಮಂತ ರಾಜಕಾರಣಿಗಳು ಮತ್ತು ಉದ್ಯಮಿಗಳನ್ನು ಮುತ್ತಿಗೆ ಹಾಕುತ್ತಿವೆ. ಆಡಳಿತ ಪಕ್ಷವು ಪ್ರತಿಪಕ್ಷಗಳ ಮೇಲೆ ಒತ್ತಡ ಹೇರಲು ಇಂತಹ ತಂತ್ರಗಳನ್ನು ಬಳಸುತ್ತಿದೆ ಎಂದು ಶಿವಸೇನೆಯು ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಬರೆದಿದೆ.

ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ನಿವಾಸಕ್ಕೆ ಈಡಿ ನಡೆಸಿದ ದಾಳಿಯು ಕಾನೂನು ಬಾಹಿರ ಎಂದು ಎಂದು ಮಹಾರಾಷ್ಟ್ರ ಪೊಲೀಸರು ಈಗಾಗಲೇ ಒಪ್ಪಿಕೊಂಡಿದ್ದಾರೆ. ದೇಶಮುಖ್ ಅವರ ಮನೆಯನ್ನು ಸುತ್ತುವರೆದು ಒಬ್ಬ ದರೋಡೆಕೋರನ ಮೇಲೆ ದಾಳಿ ಮಾಡುವಂತೆ ಪೊಲೀಸರು ವರ್ತಿಸಿದ್ದಾರೆ. ಆದರೆ ಈ ದಾಳಿಯು ಕಾನೂನುಬಾಹಿರ ಎಂದು ಶಿವಸೇನೆ ಹೇಳಿದೆ.

Join Whatsapp