ಮತ್ತೆ ಶಿವಸೇನೆ – ಬಿಜೆಪಿ ಮೈತ್ರಿ: ಸಿಎಂ ಉದ್ಧವ್ ಠಾಕ್ರೆಯಿಂದ ಪೂರಕ ಹೇಳಿಕೆ

Prasthutha|

ಮುಂಬೈ: ಸಿಎಂ ಉದ್ಧವ್ ಠಾಕ್ರೆ ನೀಡಿರುವ ಹೇಳಿಕೆಯೊಂದು ಮತ್ತೆ ಬಿಜೆಪಿ ಹಾಗೂ ಶಿವಸೇನೆ ಪುರ್ನಮಿಲನವಾಗಲಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಔರಾಂಗಾಬಾದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ರವ್ ಸಾಹೇಬ್ ಪಾಟೀಲ್ ದಾನ್ವೆ ಸೇರಿದಂತೆ ಹಲವು ನಾಯಕರನ್ನು ಭವಿಷ್ಯದ ಸಹೋದ್ಯೋಗಿಗಳು ಎಂದು ಠಾಕ್ರೆ ಸಂಬೋಧಿಸಿರುವುದೇ ಈ ಊಹಾಪೋಹ ಉಂಟಾಗಲು ಕಾರಣವಾಗಿದೆ.

- Advertisement -


ನನ್ನ ಹಿಂದಿನ, ಈಗಿನ ಹಾಗೂ ಮತ್ತೆ ನಾವು ಒಂದಾದರೆ ಭವಿಷ್ಯ ಸಹೋದ್ಯೋಗಿಗಳೇ ಎಂದು ಕಾರ್ಯಕ್ರಮದಲ್ಲಿ ಉದ್ಧವ್ ಠಾಕ್ರೆ ಸಂಬೋಧಿಸಿದ್ದಾರೆ.


ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ಸಚಿವ ಬಾಳಾಸಾಹೇಬ್ ಥೋರಟ್ ಹಾಗೂ ಮಹಾರಾಷ್ಟ್ರ ಬಿಜೆಪಿ ನಾಯಕ ದಾನ್ವೆ ಕೂಡ ಹಾಜರಿದ್ದರು.

- Advertisement -


ಬಳಿಕ ಮಾಧ್ಯಮದ ಎದುರು ಮಾತನಾಡುವ ವೇಳೆ ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದ ಠಾಕ್ರೆ, ಹಿಂದಿನ ಹಾಗೂ ಪ್ರಸ್ತುತ ಸಹೋದ್ಯೋಗಿಗಳು ಅಲ್ಲಿ ಇದ್ದುದರಿಂದ ತಾವು ಈ ರೀತಿ ಹೇಳಿದ್ದಾಗಿ ಸಬೂಬು ನೀಡಿದ್ದಾರೆ.
ಎಲ್ಲರೂ ಒಗ್ಗೂಡಿದರೆ, ಅವರು ಸಹ ಭವಿಷ್ಯದ ಸಹೋದ್ಯೋಗಿಗಳಾಗಬಹುದು. ಸಮಯ ಎಲ್ಲವನ್ನೂ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.

Join Whatsapp