ಬೆಳಗಾವಿ ಪ್ರವೇಶಿಸಲು ಶಿವಸೇನೆ ಕಾರ್ಯಕರ್ತರು ಯತ್ನ: ತಡೆದ ಪೊಲೀಸರು

Prasthutha|

ನಿಪ್ಪಾಣಿ: ಬೆಳಗಾವಿ ಪ್ರವೇಶಿಸಲು ಯತ್ನಿಸಿದ ಮಹಾರಾಷ್ಟ್ರದ ಶಿವಸೇನೆಯ ಕಾರ್ಯಕರ್ತರನ್ನು ಸೋಮವಾರ ಕೊಗನೊಳಿ ಚೆಕ್ ಪೋಸ್ಟ್ ಬಳಿ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ತಡೆದಿದ್ದು, ಬಳಿಕ ಅವರನ್ನು ಮರಳಿ ಕಳುಹಿಸಿದ್ದಾರೆ.

- Advertisement -


ರಾಜ್ಯ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಶಿವಸೇನೆಯ ಕೊಲ್ಹಾಪುರ ಜಿಲ್ಲಾಧ್ಯಕ್ಷ ವಿಜಯ ದೇವಣೆ ಮತ್ತು ಕಾರ್ಯಕರ್ತರನ್ನು ಗಡಿಯಲ್ಲಿಯೇ ಪೊಲೀಸರು ತಡೆದರು.


ಕೂಡಲೇ ಶಿವಸೇನೆಯ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಕುಳಿತುಕೊಂಡರು. ನಂತರ ಪಕ್ಕದ ದೂಧಗಂಗಾ ನದಿಯಲ್ಲಿ ಇಳಿದು, “ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ನದಿಯು ಹರಿಯುತ್ತದೆ. ಇದಕ್ಕೆ ನಮಸ್ಕರಿಸಿದ್ದು ನಾವು ಬೆಳಗಾವಿಯನ್ನು ತಲುಪಿದಂತಾಗಿದೆ” ಎಂದು ಹೇಳಿದ್ದಾರೆ.

Join Whatsapp