ಶಿರೂರು ಗುಡ್ಡ ಕುಸಿತ: ಸರ್ಕಾರದ ನಡೆ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಕೇರಳ ಲಾರಿ ಚಾಲಕನ ಕುಟುಂಬ

Prasthutha|

- Advertisement -

ಕಾರವಾರ: ಅಂಕೋಲದ ಶಿರೂರು ಬಳಿ ಗುಡ್ಡ ಕುಸಿತ ಸಂಭವಿಸಿ ಒಂದು ವಾರ ಕಳೆದಿದೆ. ರಾಷ್ಟ್ರೀಯ ಹೆದ್ದಾರಿ ಮೇಲೆ ಬಿದ್ದಿರುವ ಸಾವಿರಾರು ಟನ್ ಮಣ್ಣು ತೆರವು ಕಾರ್ಯ 70% ಮುಕ್ತಾಯವಾಗಿದೆ. ಮೃತರಾದ ಹನ್ನೊಂದು ಜನರ ಪೈಕಿ 8 ಜನರ ಮೃತದೇಹ ಪತ್ತೆ ಆಗಿದ್ದು 4 ಜನರ ಶವ ಪತ್ತೆಯಾಗಬೇಕಿದೆ.

ಈ ಮಧ್ಯೆ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಕುಟುಂಬಸ್ಥರಿಂದ ಸರ್ಕಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದು ಅರ್ಜಿ ಸಲ್ಲಿಸಲಾಗಿದೆ.

- Advertisement -

ಘಟನಾ ಸ್ಥಳದಲ್ಲಿ ಲಾರಿಯ ಜಿಪಿಆರ್​ಎಸ್​ ಲಾಸ್ಟ್ ಲೊಕೇಶನ್ ಪತ್ತೆ ಹಿನ್ನೆಲೆ ಕಾರ್ಯಾಚರಣೆ ಅವೈಜ್ಞಾನಿಕವಾಗಿ, ವಿಳಂಬವಾಗಿ ನಡೀತಿದೆ ಎಂದು ಲಾರಿ ಚಾಲಕ ಅರ್ಜುನ್ ಕುಟುಂಬಸ್ಥರಿಂದ ಆರೋಪಿಸಲಾಗಿದೆ. ಹಾಗಾಗಿ ರಾಜ್ಯ ಸರ್ಕಾರದಿಂದ ಹೈಕೋರ್ಟ್ ವರದಿ ಕೇಳಿದ್ದು,​ ನಾಳೆ ಈ ಪ್ರಕರಣ ಸಂಬಂಧ ವಿಚಾರಣೆ ನಡೆಯಲಿದೆ.



Join Whatsapp