ಕಾರವಾರ: ಶಿರೂರಿನಲ್ಲಿ ಭೂಕುಸಿತವಾಗಿ ಒಂದು ತಿಂಗಳು ಕಳೆದಿದ್ದು, ಶುಕ್ರವಾರ ಸಹ ಈಶ್ವರ್ ಮಲ್ಪೆ ನೇತೃತ್ವದಲ್ಲಿ ಕಾಣೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಘಟ್ಟ ಪ್ರದೇಶದಲ್ಲಿ ಮಳೆಯಿಂದ ನದಿ ನೀರು ಮಣ್ಣು ಮಿಶ್ರಿತವಾಗಿದೆ. ಇದರಿಂದ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ. ಈ ಹಿನ್ನಲೆಯಲ್ಲಿ ಇಂದು ಗಂಗಾವಳಿ ನದಿಯಲ್ಲಿ ಬಿದ್ದಿರುವ ಎರಡು ಆಲದ ಮರವನ್ನು ಹೊರೆತೆಗೆಯಲು ನೌಕಾದಳ ಸಿದ್ಧತೆ ಮಾಡಿಕೊಂಡಿದೆ. ಕಾರ್ಯಾಚರಣೆಯಲ್ಲಿ NDRF ಹಾಗೂ SDRF ತಂಡ ಸಹ ಭಾಗಿಯಾಗಿದೆ.
ಬೆಳಗ್ಗಿನಿಂದ ಮೊದಲು ಶವ ಶೋಧಕ್ಕಾಗಿ ಕಾರ್ಯಾಚರಣೆ ಮಾಡಲಾಯಿತು. ಆದರೇ ಯಲ್ಲಾಪುರ ಭಾಗದಲ್ಲಿ ಮಳೆಯಿಂದ ಗಂಗಾವಳಿ ನದಿ ನೀರು ಮಣ್ಣು ಮಿಶ್ರಣವಾಗಿ ಕೆಂಪಾಗಿದೆ. ಹೀಗಾಗಿ ಶವ ಶೋಧಕ್ಕೆ ಅಡ್ಡಿಯಾಗಿದೆ.