ಕಾರವಾರ : ಶಿರೂರು ಗ್ರಾಮದ ಬಳಿ ಗುಡ್ಡ ಕುಸಿತ ದುರಂತದಲ್ಲಿ ಕಣ್ಮರೆಯಾದ ಲೋಕೇಶ್ ನಾಯ್ಕ ಮತ್ತು ಜಗನ್ನಾಥ ನಾಯ್ಕ ಕುಟುಂಬದವರಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಲಾ ರೂ.5 ಲಕ್ಷ ಪರಿಹಾರವನ್ನು ವಿತರಿಸಿದರು.
ಈ ದುರಂತದಲ್ಲಿ ಮಡಿದ ಎಲ್ಲಾ 11 ಜನರ ವಾರಸುದಾರರಿಗೆ ಈಗ ಪರಿಹಾರ ವಿತರಿಸಿದಂತಾಗಿದೆ. ಇಬ್ಬರ ಶವ ಸಿಗದ ಕಾರಣ ಪರಿಹಾರ ವಿತರಣೆ ಎರಡು ಕುಟುಂಬಕ್ಕೆ ಕಾನೂನು ತೊಡಕು ಎದಿರಾಗಿತ್ತು. ಹೈಕೋರ್ಟ್ ಸೂಚನೆ ಹಾಗೂ ಸರ್ಕಾರದ ವಿಶೇಷ ಆಸಕ್ತಿ ಯಿಂದ ಪರಿಹಾರ ಈಗ ನೀಡಿದಂತಾಗಿದೆ.
9 ಜನರ ಶವ ಸಿಕ್ಕ ತಕ್ಷಣ ತಲಾ 5 ಲಕ್ಷ ದಂತೆ 45 ಲಕ್ಷ ಪರಿಹಾರ ಮೊದಲೇ ವಿತರಿಸಲಾಗಿತ್ತು. ಇಂದು ಜಗನ್ನಾಥ ನಾಯ್ಕ ಕುಟುಂಬಕ್ಕೆ ಐದು ಲಕ್ಷ, ಲೋಕೇಶ್ ನಾಯ್ಕ ಸಹೋದರ ನಿಗೆ 5 ಲಕ್ಷ ಪರಿಹಾರ ನೀಡಲಾಯಿತು. ಜಗನ್ನಾಥ ನಾಯ್ಕನ ಇಬ್ಬರು ಹೆಣ್ಣು ಮಕ್ಕಳಿಗೆ ಸರ್ಕಾರಿ ನೌಕರಿ ಸಹ ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆ ಹಾಗೂ ಕೈಗಾ ದಲ್ಲಿ ಜಗನ್ನಾಥ ನಾಯ್ಕ ಮಕ್ಕಳು ನೌಕರಿ ಪಡೆದಿದ್ದಾರೆ.