ಶಿರೂರು ಗುಡ್ಡ ಕುಸಿತ: ನಿವೃತ್ತ ಸೇನಾಧಿಕಾರಿ ತಂಡದಿಂದ ಶೋಧ

Prasthutha|

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತವಾಗಿ 11 ದಿನವಾಗಿದೆ.

- Advertisement -


11 ಜನರ ಪೈಕಿ ಮೂರು ಜನರ ಶೋಧಕಾರ್ಯ ನಡೆಯುತಿದೆ. ನಿವೃತ್ತ ಸೇನಾಧಿಕಾರಿ ಇಂದ್ರಬಾಲ ತಂಡದಿಂದ ಕಾರ್ಯಾಚರಣೆ ನಡೆದಿದ್ದು, ಈ ವೇಳೆ ನದಿಯಲ್ಲಿ ಮೂರು ಕಬ್ಬಿಣದ ವಸ್ತು ಪತ್ತೆಯಾಗಿದೆ. ಮೂರು ವಸ್ತುಗಳ ಪೈಕಿ ಒಂದು ಲಾರಿ ಇರುವುದು ಗೊತ್ತಾಗಿದೆ.


ಡ್ರೋನ್ ಹಾಗೂ ಥರ್ಮಲ್ ಸ್ಕ್ಯಾನ್ ಕಾರ್ಯಾಚರಣೆ ನಡೆಸಿದ ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ಹೇಳುವಂತೆ ನದಿಯಲ್ಲಿ ರೆಲಿಂಗ್, ಟವರ್, ಲಾರಿ, ಟ್ಯಾಂಕರ್ ಕ್ಯಾಬಿನ್ ಸಿಗಬೇಕಿತ್ತು. ಮೂರು ಸ್ಪಾಟ್ ಗಳು ಸಿಕ್ಕಿದ್ದು, ಅದರ ಪೈಕಿ ಅರ್ಜುನ್ ಲಾರಿ ಯಾವುದು ಎಂದು ಸಿಗಬೇಕಿದೆ. 60 ಮೀ. ಉದ್ದ ಹಾಗೂ 20 ಮೀ. ಆಳದಲ್ಲಿ ಒಂದು ಮೆಟಲ್ ಡಿಟೆಕ್ಟ್ ಆಗಿದ್ದು, 400 ಲಾಗ್ಸ್ ಟ್ರಕ್ ನಲ್ಲಿದ್ದದ್ದರಿಂದ ಹೆಚ್ಚು ಆಳದಲ್ಲಿ ಇರುವ ಸಾಧ್ಯತೆಗಳಿತ್ತು. 500 ಮೀ. ದೂರದಲ್ಲಿ ಮರದ ದಿಮ್ಮಿಗಳು ಸಿಕ್ಕಿದ್ದು, ಲಾರಿಯಿಂದ ಕೆಲವು ದಿಮ್ಮಿಗಳು ದೂರಾಗಿವೆ ಎಂದಿದ್ದಾರೆ.



Join Whatsapp