ಶಿವಮೊಗ್ಗ | ಇಬ್ಬರ ಕೊಲೆ: ಆರೋಪಿ ಬಂಧನ

Prasthutha|

ತೀರ್ಥಹಳ್ಳಿ: ಕ್ಷುಲ್ಲಕ ಕಾರಣಕ್ಕೆ ಇಬ್ಬರು ಕೂಲಿ ಕಾರ್ಮಿಕರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -


ದಾವಣಗೆರೆ ನಗರದ ಬೀರೇಶ್ (35) ಮತ್ತು ಮಂಜುನಾಥ್ (46) ಕೊಲೆಯಾದವರು. ಕೊಲೆ ಆರೋಪಿ ರಾಜಣ್ಣನನ್ನು (58) ಬಂಧಿಸಲಾಗಿದೆ.


ಸಮುದಾಯ ಭವನದ ಟೈಲ್ಸ್ ಜೋಡಣೆ ಕೆಲಸಕ್ಕಾಗಿ ದಾವಣಗೆರೆಯಿಂದ 12 ದಿನಗಳ ಹಿಂದೆ 5 ಜನರು ಬಂದಿದ್ದರು. ರಾಜಣ್ಣ ಎಲ್ಲ ಕೂಲಿ ಕೆಲಸಗಾರರಿಗೆ ಅಡುಗೆ ಮಾಡಿಕೊಂಡಿದ್ದರು. ಗುರುವಾರ ಬೆಳಿಗ್ಗೆ ಕಾರ್ಮಿಕರಿಗೆ ಇಡ್ಲಿ ಕೊಟ್ಟಿದ್ದರು. ರಾತ್ರಿಯೂ ಅದನ್ನೇ ತಿನ್ನಲು ರಾಜಣ್ಣ ಹೇಳಿದ್ದಾರೆ. ಇದೇ ವಿಚಾರಕ್ಕೆ ಇವರ ಮಧ್ಯೆ ಗಲಾಟೆಯಾಗಿದ್ದು ರಾಜಣ್ಣನನ್ನು ಮಂಜುನಾಥ್ ಮತ್ತು ಬೀರೇಶ್ ಎಳೆದಾಡಿ ಹೊಡೆದಿದ್ದಾರೆ.

- Advertisement -


ಇದರಿಂದ ಕೋಪಗೊಂಡ ರಾಜಣ್ಣ ರಾತ್ರಿ ಊಟ ಮುಗಿಸಿ ಟೆರೆಸ್ ಮೇಲೆ ಮಲಗಿದ್ದ ಮಂಜುನಾಥ್, ಕಟ್ಟಡದ ಒಳಗೆ ಮಲಗಿದ್ದ ಬೀರೇಶ್ ಮೇಲೆ ಪಿಕಾಸಿಯಿಂದ ತಲೆಗೆ ಹೊಡೆದಿದ್ದಾರೆ. ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Join Whatsapp