ಶಿವಮೊಗ್ಗ: ಈ ವರ್ಷದ ಮೊದಲ ಮಂಗನ ಕಾಯಿಲೆ (ಕೆಎಫ್ ಡಿ) ಪ್ರಕರಣ ಪತ್ತೆಯಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಶೇಡ್ಗಾರ್ ಬಳಿಯ ಅತ್ತಿಸರ ಗ್ರಾಮದ 53 ವರ್ಷದ ಮಹಿಳೆಗೆ ಆರ್ ಟಿಸಿಪಿಆರ್ ನಲ್ಲಿ ಪಾಸಿಟಿವ್ ಬಂದಿದೆ.
ಪಾಸಿಟಿವ್ ಬಂದ ಮಹಿಳೆ ಆರೋಗ್ಯ ಸ್ಥಿರವಾಗಿದ್ದು ಅವರನ್ನು ತೀರ್ಥಹಳ್ಳಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಅತ್ತಿಸರ ಕಾಡಂಚಿನ ಗ್ರಾಮವಾಗಿದ್ದು ಈ ಹಿಂದೆಯು ಈಭಾಗದಲ್ಲಿ ಕೆಎಫ್ ಡಿ ಪ್ರಕರಣಗಳು ಕಂಡುಬಂದಿವೆ.
ಮಲೆನಾಡಿಗರನ್ನು ಮಂಗನ ಕಾಯಿಲೆ ಬಿಟ್ಟು ಬಿಡದೇ ಕಾಡುತ್ತಿದೆ. 1957ರಲ್ಲಿ ಶಿವಮೊಗ್ಗ ಜಿಲ್ಲೆಯ ಕ್ಯಾಸನೂರಿನಲ್ಲಿ ಮೊದಲ ಬಾರಿಗೆ ಈ ಮಂಗನ ಕಾಯಿಲೆ ಕಂಡುಬಂದಿತ್ತು. ಹೀಗಾಗಿಯೇ ಈ ರೋಗಕ್ಕೆ ‘ಕ್ಯಾಸನೂರು ಡಿಸೀಸ್ ಫಾರೆಸ್ಟ್’ ಅಂತಾ ಕರೆಯುತ್ತಾರೆ. ಕೆಎಫ್ ಡಿ ರೋಗಕ್ಕೆ ಇದುವರೆಗೆ ನೂರಾರು ಮಂದಿ ಬಲಿಯಾಗಿದ್ದಾರೆ.