ಶಿವಮೊಗ್ಗ: ಎಡೆಬಿಡದೆ ಸುರಿಯುತ್ತಿರುವ ಮಳೆ; ಮನೆ ಸಂಪೂರ್ಣ ನೆಲಸಮ

Prasthutha|

ಸಾಗರ: ಮಲೆನಾಡಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಉಳ್ಳೂರು ಗ್ರಾಮ ಪಂಚಾಯಿತಿಯ ಕಾಸ್ಪಾಡಿ ಗ್ರಾಮದ ನೀಲಮ್ಮರವರ ಮನೆ ಸಂಪೂರ್ಣವಾಗಿ ಬಿದ್ದುಹೋಗಿದೆ.

- Advertisement -


ಮನೆಯಲ್ಲಿದ್ದ ವಸ್ತುಗಳು ಕುಸಿದ ಮನೆಯಡಿಯಲ್ಲಿ ಮಣ್ಣು ಪಾಲಾಗಿದ್ದರಿಂದ ಊಟಕ್ಕೂ, ಉಳಿಯುವುದಕ್ಕೂ ಸಹ ಅವಕಾಶ ಇಲ್ಲದಂತಾಗಿದೆ.


ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲ ಕೃಷ್ಣ, ಸಂತ್ರಸ್ತ ಮಹಿಳೆಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು. ಆದಷ್ಟು ಬೇಗ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಆಡಳಿತ ನೀಲಮ್ಮ ಅವರಿಗೆ ನೆರವಾಗಿ ಊಟ, ವಸತಿ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.



Join Whatsapp