ಶಿವಮೊಗ್ಗ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

Prasthutha|

ಸಾಗರ : ಸಾಲಬಾಧೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಆನಂದಪುರದಲ್ಲಿ ನಡೆದಿದೆ.

- Advertisement -

ಆತ್ಮಹತ್ಯೆ ಮಾಡಿಕೊಂಡಿರುವ ರೈತನನ್ನು ಸಂದೀಪ್ (28) ಎಂದು ಗುರುತಿಸಲಾಗಿದೆ. ರೈತ ಸಂದೀಪ್  ಜಡೆ ಗ್ರಾಮದ ಕೆನರಾ ಬ್ಯಾಂಕಿನಲ್ಲಿ ಕೃಷಿ ಸಾಲಮಾಡಿಕೊಂಡಿದ್ದ. ವಿಪರೀತ ಮಳೆಯಿಂದಾಗಿ ಫಸಲು ಕೊಚ್ಚಿಕೊಂಡು ಹೋಗಿ  ನಷ್ಟ ಉಂಟಾಗಿದೆ. ಇದರಿಂದ ಮನನೊಂದ ಸಂದೀಪ ವಿಷ ಸೇವಿಸಿದ್ದಾನೆ.

ತಕ್ಷಣವೇ  ಆತನನ್ನು ಶಿವಮೊಗ್ಗದ ಮೆಗ್ಗಾನ್ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

- Advertisement -

ಈ ಬಗ್ಗೆ ಮೃತನ ತಮ್ಮ ಲಿಂಗರಾಜು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




Join Whatsapp