ಶಿವಮೊಗ್ಗ: ಕೋಮು ಗಲಭೆಯಿಂದಾಗಿ ನಗರದ ಆರ್ಥಿಕತೆಗೆ ಬಲವಾದ ಪೆಟ್ಟುಬಿದ್ದಿದ್ದು, ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ ಎಂದು ವರ್ತಕರು ಬೇಸರ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ವರ್ತಕರ ಸಂಘದ ಅಧ್ಯಕ್ಷ ದಿನಕರ್ ಅವರು, ಗಾಂಧಿ ಬಜಾರ್ ಶಿವಮೊಗ್ಗದ ಆರ್ಥಿಕತೆಯ ಜೀವನಾಡಿಯಾಗಿದ್ದು, ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೂ ತಕ್ಷಣ ಗಾಂಧಿಬಜಾರ್‌ನಲ್ಲಿ ವಹಿವಾಟು ಬಂದ್ ಮಾಡಿಸಲಾಗುತ್ತಿದೆ. ಅದನ್ನೇ ಬಂದ್ ಮಾಡಿದರೆ ನಾವು ಎಲ್ಲಿಗೆ ಹೋಗಬೇಕು ಎಂದು ಅಸಹಾಕತೆ ವ್ಯಕ್ತಪಡಿಸಿದರು.
ಕೊರೋನ ಸಂದರ್ಭದಲ್ಲಿ ವ್ಯಾಪಾರಸ್ಥರು ಬಹಳ ನಷ್ಟ ಅನುಭವಿಸಿದ್ದು, ಈ ಹಿಂದೆ ಶೇ 100 ರಷ್ಟು ನಡೆಯುತ್ತಿದ್ದ ವ್ಯಾಪಾರ ಇದೀಗ ಶೇ 30ಕ್ಕೆ ಕುಸಿದಿದೆ. ಇದನ್ನು ಸರಿಪಡಿಸಲು ಎಲ್ಲರೂ ಪ್ರಯತ್ನಿಸಬೇಕಿದೆ ಎಂದು ಮನವಿ ಮಾಡಿದರು.