ಶಿವಮೊಗ್ಗ: ಲಾರಿಗೆ ಬೈಕ್ ಡಿಕ್ಕಿ; ಕಾರ್ಮಿಕರು ಸಾವು

Prasthutha|

ಶಿವಮೊಗ್ಗ: ಡೀಸೆಲ್ ಖಾಲಿಯಾಗಿ ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು, ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ತಾಲೂಕಿನ ಅಬ್ಬಲಗೆರೆಯಲ್ಲಿ ನಡೆದಿದೆ.

- Advertisement -


ದಾವಣಗೆರೆ ಜಿಲ್ಲೆಯ ನ್ಯಾಮತಿ ಮೂಲದ ರಾಮ್ ಕುಮಾರ್ (22) ಹಾಗೂ ಮಲ್ಲಿಕಾರ್ಜುನ (30) ಮೃತ ಕಾರ್ಮಿಕರು.

ಐಪಿಸಿ ಕಂಪನಿಯಲ್ಲಿ ಕಾರ್ಮಿಕರಾಗಿರುವ ಇವರಿಬ್ಬರು ಕೆಲಸ ಮುಗಿಸಿ ಮರಳುತ್ತಿದ್ದರು.
ಬೈಕ್ ಚಲಾಯಿಸುತ್ತಿದ್ದಾತ ನಿದ್ದೆಯ ಮಂಪರಿನಲ್ಲಿದ್ದು,ತಕ್ಷಣಕ್ಕೆ ಎದುರಾದ ವಾಹನ ತಪ್ಪಿಸಲು ಹೋಗಿ ನೇರವಾಗಿ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

- Advertisement -

ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



Join Whatsapp