ಶಿವಮೊಗ್ಗ: ಗಾಂಜಾ ಸಮೇತ ಆರೋಪಿ ಅಂಧರ್

Prasthutha|

ಹೊಸನಗರ : ಗಾಂಜಾ ಸಮೇತ ಆರೋಪಿಯನ್ನು ವಶಕ್ಕೆ ಪಡೆದಿರುವ ಘಟನೆ ಹೊಸನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

- Advertisement -


ಹೊಸನಗರ ಅಬಕಾರಿ ಅಧಿಕಾರಗಳು ಮಿಂಚಿನ ಕಾರ್ಯಾಚರಣೆ ನಡೆಸಿ ಕಾರು ಸಮೇತ ಅಕ್ರಮ ಗಾಂಜಾ ವಶಕ್ಕೆ ಪಡೆದು ಆರೋಪಿ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಖಚಿತ ಮಾಹಿತಿಯನ್ವಯ ಹೊಸನಗರ ವಲಯ ಅಬಕಾರಿ ನೀರಿಕ್ಷಕರು ಹಾಗೂ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ತಾಲೂಕಿನ ಕೇಶವಪುರ ಗ್ರಾಮದ ಶೇಕ್ ಫೈಝರ್ ಮಸೂದ್ ಬಿನ್ ಶೇಕ್ ಫಾರೂಕ್ ಮಸೂದ್ ಎಂಬಾತನನ್ನು ಬಂಧಿಸಿ ಕಾರಿನಲ್ಲಿದ್ದ 60 ಗ್ರಾಂ ಒಣ ಗಾಂಜಾ ಸೊಪ್ಪುನ್ನು ಮತ್ತು ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ ಅಂದಾಜು 2,05,000 ರೂ. ಎಂದು ತಿಳಿದು ಬಂದಿದೆ.

- Advertisement -


ಹೊಸನಗರ ವಲಯದ ಅಬಕಾರಿ ನೀರಿಕ್ಷಕರಾದ ನಾಗರಾಜ ಎ ಜೆ, ಕೆಂಪರಾಮು, ಅಬಕಾರಿ ಮುಖ್ಯಪೇದೆ, ಪಾಂಡು ಅಂಬವ್ವಗೊಳ್, ಅಬಕಾರಿ ಪೇದೆ ಹಾಗೂ ವಾಹನ ಚಾಲಕ ಉಮೇಶ್ ಎಸ್ ಡಿ ಭಾಗವಹಿಸಿದ್ದರು.



Join Whatsapp