ಆಸ್ಟ್ರೇಲಿಯಾ ಲಿಬರಲ್ ಪಕ್ಷದ ಉನ್ನತ ಸಮಿತಿ ಸದಸ್ಯರಾಗಿ ಉಡುಪಿಯ ಶಿಲ್ಪಾ ಹೆಗ್ಡೆ ಆಯ್ಕೆ

Prasthutha|

ಉಡುಪಿ : ಕರ್ನಾಟಕದ ಉಡುಪಿ ಮೂಲದ ಕನ್ನಡತಿ ಶಿಲ್ಪಾ ಹೆಗ್ಡೆ (44) ಆಸ್ಟ್ರೇಲಿಯಾ ಪ್ರಧಾನಿ ಸ್ಕಾಮ್ ಮಾರಿಸನ್ ನೇತೃತ್ವದ ಲಿಬರಲ್ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

- Advertisement -

ಉಡುಪಿಯ ಪೆರ್ಡೂರು ಮೂಲದ ಶಿಲ್ಪಾ, ಮೋಹನ್ ದಾಸ್ ಹೆಗ್ಡೆ ಹಾಗೂ ಶಶಿಕಲಾ ದಂಪತಿಯ ಪುತ್ರಿ. ನಿಟ್ಟೆ ಎನ್ ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವ್ಯಾಸಾಂಗ ಮಾಡಿದ್ದು, ಇಪ್ಪತ್ತು ವರ್ಷದಿಂದ ಆಸ್ಟ್ರೇಲಿಯಾದಲ್ಲಿದ್ದಾರೆ.

ಪ್ರಸ್ತುತ ಅಲ್ಲಿನ ಡಿಡಬ್ಲ್ಯೂಎಸ್ ಗ್ಲೋಬಲ್ ಕಂಪೆನಿಯ ಐಟಿ ಕನ್ಸಲ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿಲ್ಪಾ ಪತಿ ದಯಾನಂದ ಶೆಟ್ಟಿ ಕೂಡ ಆಸ್ಟ್ರೇಲಿಯಾದಲ್ಲಿ ಉದ್ಯಮಿಯಾಗಿದ್ದಾರೆ. ಶಿಲ್ಪಾ ಪತಿ ದಯಾನಂದ ಶೆಟ್ಟಿ ಕೂಡ ಆಸ್ಟ್ರೇಲಿಯಾದಲ್ಲಿ ಉದ್ಯಮಿಯಾಗಿದ್ದಾರೆ.

- Advertisement -

2013ರ ಫೆಡರಲ್ ಚುನಾವಣೆಯಲ್ಲಿ ಶಿಲ್ಪಾ ಹೆಗ್ಡೆ ಮೆಲ್ಬರ್ನ್ ನ ವಿಲ್ಸ್ ನಿಂದ ಚುನಾವಣೆ ಸ್ಪರ್ಧಿಸಿದ್ದರು. ಇದೀಗ ಅವರನ್ನು ಲಿಬರಲ್ ಪಕ್ಷದ ಉನ್ನತ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಿತಿ ಇದಾಗಿದ್ದು, ಈ ಸಮಿತಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಮಹಿಳೆ ಎಂದು ಶಿಲ್ಪಾ ಗುರುತಿಸಿಕೊಂಡಿದ್ದಾರೆ. ಈ ವರ್ಷದ ಕೊನೆ ಅಥವಾ 2022ರಲ್ಲಿ ಆಸ್ಟ್ರೇಲಿಯಾ ಚುನಾವಣೆ ನಡೆಯಲಿದೆ.

Join Whatsapp