ಶೇಖ್ ಹಸೀನಾ ಸೊಸೆ ಬ್ರಿಟನ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ

Prasthutha|

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸೋದರ ಸೊಸೆ ಮತ್ತು ಲೇಬರ್ ಪಕ್ಷದ ಸಂಸದೆ ಟ್ಯೂಲಿಪ್ ಸಿದ್ದಿಕ್ ಬ್ರಿಟನ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

- Advertisement -

ಕಳೆದ ವಾರ ಲಂಡನ್‌ನಲ್ಲಿರುವ ಅವರ ಆಸ್ತಿಗಳಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ಮತ್ತು ಪಾರದರ್ಶಕತೆಯ ಕೊರತೆಯ ಆರೋಪವನ್ನು ಎದುರಿಸಿದ್ದರು.

ಸಿದ್ದಿಕಿ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಈ ಆರೋಪಗಳನ್ನು ತಳ್ಳಿಹಾಕಿದ್ದು, ಎಲ್ಲಾ ವಿಷಯಗಳಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ಅಧಿಕಾರಿಗಳ ಸಲಹೆಯನ್ನು ಪಾಲಿಸಿದ್ದೇನೆ ಎಂದು ಹೇಳಿದ್ದಾರೆ. ಹಣಕಾಸು ಸಚಿವ ಹುದ್ದೆಯಲ್ಲಿ ಮುಂದುವರಿಯುವುದರಿಂದ ಸರ್ಕಾರದ ಕೆಲಸಕ್ಕೆ ಅಡ್ಡಿಯಾಗಬಹುದು ಎಂದು ಟ್ಯೂಲಿಪ್ ಸಿದ್ದಿಕಿ ರಾಜೀನಾಮೆಯಲ್ಲಿ ತಿಳಿಸಿದ್ದಾರೆ.

- Advertisement -

ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ರಾಜೀನಾಮೆಯನ್ನು ಅಂಗೀಕರಿಸಿದರು ಮತ್ತು ಭವಿಷ್ಯಕ್ಕಾಗಿ ಅವರಿಗೆ ಶುಭ ಹಾರೈಸಿದರು. ಟುಲಿಪ್ ಸಿದ್ದಿಕಿ ಬದಲಿಗೆ ಲೇಬರ್ ಸಂಸದೆ ಎಮ್ಮಾ ರೆನಾಲ್ಡ್ಸ್ ಹೊಸ ಹಣಕಾಸು ಮಂತ್ರಿಯಾಗಲಿದ್ದಾರೆ ಎಂದು ಡೌನಿಂಗ್ ಸ್ಟ್ರೀಟ್ ಘೋಷಿಸಿತು.



Join Whatsapp