ಇನ್ನೂ ಕೆಲವು ದಿನಗಳು ಭಾರತದಲ್ಲೇ ಉಳಿಯಲಿರುವ ಶೇಖ್ ಹಸೀನಾ

Prasthutha|

ನವದೆಹಲಿ: ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾರವರ ಬ್ರಿಟನ್‌ನಲ್ಲಿ ರಾಜಕೀಯ ಆಶ್ರಯ ಪಡೆಯುವ ನಿರ್ಧಾರಕ್ಕೆ ಹಿನ್ನಡೆಯುಂಟಾಗಿದ್ದು, ಈ ಹಿನ್ನೆಲೆಯಲ್ಲಿ ಆವರು ಇನ್ನೂ ಕೆಲವು ದಿನಗಳ ಕಾಲ ಭಾರತದಲ್ಲೇ ಉಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಈಗ ಅವರನ್ನು ಭದ್ರತೆಯ ಕಾರಣದಿಂದ ಗೌಪ್ಯ ಸ್ಥಳದಲ್ಲಿ ಇರಿಸಲಾಗಿದೆ.

- Advertisement -

ಪ್ರಧಾನಿಯಾಗಿ ರಾಜೀನಾಮೆ ನೀಡಿದ ಬಳಿಕ ಹಸೀನಾ, ಸಿ-130 ಜೆ ಮಿಲಿಟರಿ ಸಾಗಣೆ ವಿಮಾನದಲ್ಲಿ ಭಾರತದ ಹಿಂಡನ್ ವಾಯುನೆಲೆಗೆ ಬಂದಿಳಿದಿದ್ದರು. ಭಾರತದಿಂದ ಲಂಡನ್‌ಗೆ ತೆರಳಲು ಉದ್ದೇಶಿಸಿದ್ದರು.

ಶೇಖ್ ಹಸೀನಾ ಜೊತೆಯಲ್ಲಿ ಆಕೆಯ ಸಹೋದರಿ ಶೇಖ್ ರಿಹಾನಾ ಇದ್ದು, ಭಾರತದಿಂದ ಲಂಡನ್ ಗೆ ತೆರಳುವವರಿದ್ದರು. ರಿಹಾನಾ ಅವರ ಮಗಳು ತುಲಿಪ್ ಸಿದ್ದೀಕ್ ಅವರು ಬ್ರಿಟಿಷ್ ಸಂಸತ್ತಿನ ಸದಸ್ಯರಾಗಿದ್ದಾರೆ.

- Advertisement -

ಬ್ರಿಟನ್ ಸರ್ಕಾರ ಶೇಖ್ ಹಸೀನಾಗೆ ರಾಜಕೀಯ ಆಶ್ರಯ ನೀಡುವುದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಶೇಖ್ ಹಸೀನಾ ಇನ್ನೂ ಕೆಲ ಕಾಲ ಭಾರತದಲ್ಲೇ ಉಳಿಯಲಿದ್ದಾರೆ. ಇದಕ್ಕೆ ಭಾರತ ಒಪ್ಪಿಗೆ ನೀಡಿದೆ ಎನ್ನಲಾಗಿದೆ.

ಇನ್ನೊಂದೆಡೆ ಅಮೆರಿಕ ಶೇಖ್ ಹಸೀನಾ ಅವರ ವೀಸಾವನ್ನು ರದ್ದುಗೊಳಿಸಿದೆ.ಮಾಹಿತಿಗಳ ಪ್ರಕಾರ ಶೇಖ್ ಹಸೀನಾ ಅವರಿಗೆ ಮಾತ್ರವಲ್ಲದೆ ಅವರ ಪಕ್ಷದ ಸದಸ್ಯರು ಮತ್ತು ಅಧಿಕಾರಿಗಳಿಗೆ ಕೂಡ ಅಮೆರಿಕಾ ವೀಸಾ ನಿರ್ಬಂಧಗಳನ್ನು ವಿಧಿಸಿದೆ.

ಈ ಮಧ್ಯೆ ಮೈಕ್ರೀಫೈನಾನ್ಸ್ ತಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನುಸ್ ನೇತೃತ್ವದಲ್ಲಿ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಲಿದೆ ಎಂಬ ಮಾಹಿತಿ ದೊರೆತಿದೆ.



Join Whatsapp