ಕುವೈಟ್ ಪ್ರಧಾನಿಯಾಗಿ ಶೇಖ್ ಅಹ್ಮದ್ ನವಾಫ್ ಅಲ್-ಸಬಾಹ್ ನೇಮಕ

Prasthutha|

ಕುವೈಟ್: ಕುವೈತ್ ರಾಜಕುಮಾರ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಸಬಾಹ್ ಅವರು ಭಾನುವಾರ ಶೇಖ್ ಅಹ್ಮದ್ ನವಾಫ್ ಅಲ್-ಸಬಾಹ್ ಅವರನ್ನು ಪ್ರಧಾನಿಯಾಗಿ ಮರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

- Advertisement -


ಹೊಸ ಸರ್ಕಾರದ ಸದಸ್ಯರನ್ನು ನಾಮನಿರ್ದೇಶನ ಮಾಡಲು ಶೇಖ್ ಅಹ್ಮದ್ ಅವರನ್ನು ನೇಮಿಸಲಾಗಿತ್ತು ಎಂದು ರಾಜ್ಯ ಸುದ್ದಿ ಸಂಸ್ಥೆ ಕುನಾ ವರದಿ ಮಾಡಿದೆ.


ಕುವೈತ್ ಸಂಸತ್ತಿನೊಂದಿಗೆ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಶೇಖ್ ಅಹ್ಮದ್ ಜನವರಿಯಲ್ಲಿ ತಮ್ಮ ಸರ್ಕಾರಕ್ಕೆ ರಾಜೀನಾಮೆ ನೀಡಿದ್ದರು.
ಕಳೆದ ಎರಡು ವರ್ಷಗಳಲ್ಲಿ ಕುವೈತ್ ಸರ್ಕಾರವು ನೀಡಿದ ಐದನೇ ರಾಜೀನಾಮೆ ಇದಾಗಿದೆ.

Join Whatsapp