ಮಹಿಳಾ ಸಂಸದರೊಂದಿಗೆ ಶಶಿ ತರೂರ್ ಸೆಲ್ಫಿ: ಟ್ವೀಟ್ ಗೆ ಟೀಕೆ

Prasthutha|

ನವದೆಹಲಿ: ”ಕೆಲಸ ಮಾಡಲು ಲೋಕಸಭೆ ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳುತ್ತಾರೆ”? ಎಂದು ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತರೂರ್ ಮಾಡಿರುವ ಟ್ವೀಟ್ ವಿವಾದಕ್ಕೆ ಕಾರಣವಾಗಿದೆ. ಆರು ಮಹಿಳಾ ಸಂಸದರ ಜೊತೆಗಿನ ಸೆಲ್ಫಿ ಫೋಸ್ಟ್ ಇದಾಗಿದ್ದು, ಅನೇಕ ನೆಟ್ಟಿಗರು ಸೆಕ್ಸಿಸಂ ಎಂದು ಆರೋಪಿಸಿದ್ದಾರೆ.

- Advertisement -


ಮಹಿಳಾ ಸಂಸದೆ ಸುಪ್ರಿಯಾ ಸುಳೆ, ಪ್ರನೀತ್ ಕೌರ್, ತಮಿಳ್ಸಾಚಿ, ಮಿಮಿ ಚಕ್ರವರ್ತಿ, ನುಸ್ರತ್ ಜಯಾನ್ ರೂಹಿ, ಜ್ಯೋತಿ ಮಣಿ ಇದ್ದ ಚಿತ್ರಕ್ಕೆ ತರೂರ್ ಅವರು ನೀಡಿದ ವಿವರಣೆಗೆ ಆಕ್ಷೇಪಗಳು ವ್ಯಕ್ತವಾದವು.
ನಂತರ, ಕೆಲವು ಜನರ ಮನನೊಂದಿರುವುದಕ್ಕಾಗಿ ತರೂರ್ ಕ್ಷಮೆಯಾಚಿಸಿದ್ದಾರೆ ಮತ್ತು ಒಳ್ಳೆಯ ಹಾಸ್ಯದ ರೀತಿಯಲ್ಲಿ ಮಹಿಳಾ ಸಂಸದರೊಂದಿಗೆ ಸೆಲ್ಫಿ ಮಾಡಲಾಗಿದೆ. ಇದನ್ನು ಟ್ವೀಟ್ ಮಾಡುವಂತೆ ಅವರೇ ಕೇಳಿದ್ದಾಗಿ ಶಶಿ ತರೂರ್ ಹೇಳಿದ್ದಾರೆ.


‘ಲೋಕಸಭೆಯಲ್ಲಿರುವ ಮಹಿಳೆಯರು ನಿಮ್ಮ ಕಾರ್ಯಕ್ಷೇತ್ರವನ್ನು ಆಕರ್ಷಕವಾಗಿಸುವ ಅಲಂಕಾರಿಕ ವಸ್ತುಗಳಲ್ಲ. ಅವರು ಸಂಸದರು. ನೀವು ಅಗೌರವ ತೋರಬಾರದು. ನೀವು ಲೈಂಗಿಕ ಅಭಿರುಚಿ ಹೊಂದಿದ್ದೀರಿ,’ ಎಂದು ಪತ್ರಕರ್ತೆ ವಿದ್ಯಾ ಎಂಬುವವರು ತರೂರ್ ಟ್ವೀಟ್ಗೆ ಪ್ರತಿಕ್ರಿಯಿಸಿದ್ದರು.

- Advertisement -


ಹೀಗೆ ಟ್ವೀಟರ್ ನಲ್ಲಿ ಟೀಕೆಗಳು ತೀವ್ರವಾಗುತ್ತಿದ್ದಂತೆ, ಇದನ್ನು ಒಳ್ಳೆಯ ರೀತಿಯಲ್ಲಿ ಮಾಡಲಾಗಿದ್ದು, ಕೆಲವು ಜನರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಆದರೆ ಈ ಕಾರ್ಯಸ್ಥಳದ ಸೌಹಾರ್ದತೆಯ ಪ್ರದರ್ಶನದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ನನಗೆ ಸಂತೋಷವಾಯಿತು ಎಂದು ತಿರುವನಂತಪುರದಲ್ಲಿ ಶಶಿ ತರೂರ್ ಹೇಳಿದರು.

Join Whatsapp