ವಿಜಯವಾಡ: ಸರ್ಕಾರ ಗೃಹ ಬಂಧನಕ್ಕೆ ಒಳಪಡಿಸುವ ಭೀತಿಯಿಂದ ಆಂಧ್ರ ಪ್ರದೇಶದ ಕಾಂಗ್ರೆಸ್ ಮುಖ್ಯಸ್ಥೆ ವೈ ಎಸ್ ಶರ್ಮಿಳಾ ಅವರು ರಾತ್ರಿಯಿಡಿ ಕಾಂಗ್ರೆಸ್ ಕಚೇರಿಯಲ್ಲೇ ಕಳೆದಿದ್ದಾರೆ.
‘ಚಲೋ ಸೆಕ್ರೆಟರಿಯೇಟ್’ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ತಡೆಯಲು ರಾಜ್ಯಾದ್ಯಂತ ಕಾಂಗ್ರೆಸ್ ಮುಖಂಡರನ್ನು ಬಂಧಿಸಿ ‘ಗೃಹಬಂಧನ’ದಲ್ಲಿ ಇರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಕಾಂಗ್ರೆಸ್ ನಾಯಕರನ್ನು ತಡೆಯಲಾಗುತ್ತಿದೆ. ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದೆ ಸರಿಯುದಿಲ್ಲ ಎಂದಿರುವ ಶರ್ಮಿಳಾ, ಗೃಹ ಬಂಧನದಿಂದ ತಪ್ಪಿಸಿಕೊಳ್ಳಲು ಆಂಧ್ರ ರತ್ನ ಭವನಕ್ಕೆ ತೆರಳಿ ಇಡೀ ರಾತ್ರಿಯನ್ನು ಅಲ್ಲೇ ಕಳೆದಿದ್ದಾರೆ.
ಶರ್ಮಿಳಾ ಅವರು ಹಾಸಿಗೆ ಹೊದ್ದು ಕಚೇರಿಯಲ್ಲಿ ಮಲಗಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ.
VIDEO | APCC chief YS Sharmila Reddy (@realyssharmila) spends night in her party office in Vijayawada ahead of her 'Chalo Secretariat’ protest scheduled for February 22. pic.twitter.com/9o1Q0uSmFF
— Press Trust of India (@PTI_News) February 21, 2024