ಹಿಂಸೆಗೆ ಪ್ರಚೋದನೆಯ ಆರೋಪದಡಿ ದೇಶದ್ರೋಹ ಪ್ರಕರಣ ಹೇರಿಕೆ ದುರದೃಷ್ಟಕರ: ಶರ್ಜೀಲ್ ಇಮಾಮ್

Prasthutha|

ನವದೆಹಲಿ: ತನ್ನ ವಿರುದ್ಧ ದೆಹಲಿ ಪೊಲೀಸರು ಷಡ್ಯಂತ್ರದ ಮೂಲಕ ಹಿಂಸೆಗೆ ಕರೆ ನೀಡಿದ ಆರೋಪ ಹೊರಿಸಿ ದೇಶದ್ರೋಹ ಪ್ರಕರಣದಲ್ಲಿ ಬಂಧಿಸಿರುವುದು ದುರದೃಷ್ಟಕರ. ತನ್ನ ಭಾಷಣದಲ್ಲಿ ಹಿಂಸೆಗೆ ಪ್ರಚೋದಿಸುವ ಯಾವುದೇ ಅಂಶಗಳಿಲ್ಲ ಎಂದು ಜೆ.ಎನ್.ಯು ವಿದ್ಯಾರ್ಥಿ ಶರ್ಜೀಲ್ ಇಮಾಮ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

- Advertisement -

ಸಿ.ಎ.ಎ ಮತ್ತು ಎನ್.ಆರ್.ಸಿ ವಿರುದ್ಧದ ಪ್ರತಿಭಟನೆಯ ವೇಳೆ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಡಿಯಲ್ಲಿ ಜೆ.ಎನ್.ಯು ವಿದ್ಯಾರ್ಥಿ ಶರ್ಜೀಲ್ ಇಮಾಮ್ ಅವರು ಬಂಧನಕ್ಕೊಳಗಾಗಿದ್ದರು. ಹಿಂಸೆಗೆ ಕರೆ ನೀಡಿದ್ದಾರೆಂದು ಆರೋಪಿಸಿ ಅವರ ವಿರುದ್ಧ ದೆಹಲಿ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದರು.

2019 ರಲ್ಲಿ ವಿಶ್ವವಿದ್ಯಾನಿಲಯ ತನ್ನ ಭಾಷಣದಲ್ಲಿ ಅಸ್ಸಾಮ್ ಮತ್ತು ಈಶಾನ್ಯದ ಇತರ ಭಾಗಗಳನ್ನು ಭಾರತದಿಂದ ಬೇರ್ಪಡಿಸುವ ಬೆದರಿಕೆ ಹಾಕಿದ್ದರು ಎಂಬ ಆರೋಪದಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ದೇಶದ್ರೋಹದಡಿಯಲ್ಲಿ ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶರ್ಜೀಲ್ ಅವರು ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

- Advertisement -

ಆರೋಪಿ ಪರ ಅಡ್ವಕೇಟ್ ಅಹ್ಮದ್ ಮೀರ್ ಅವರು ತನ್ನ ಕಕ್ಷಿದಾರರು ಯಾವುದೇ ರೀತಿಯಲ್ಲಿ ಹಿಂಸೆಯನ್ನು ಪ್ರಚೋದಿಸಿಲ್ಲವೆಂಬ ವಾದವನ್ನು ಹೆಚ್ಚುವರಿ ನ್ಯಾಯಾಧೀಶರಾದ ಅಮಿತಾಬ್ ರಾವತ್ ರಲ್ಲಿ ಮಂಡಿಸಿದರು. ಶರ್ಜೀಲ್ ಅವರು ಅಸಾಂವಿಧಾನಿಕ ಶಾಸನವಾದ ಸಿ.ಎ.ಎ/ ಎನ್.ಆರ್.ಸಿ ವಿರುದ್ಧ ಪ್ರಜಾಸತ್ತಾತ್ಮಕವಾಗಿ ಬೀದಿಗಿಳಿದು ಹೋರಾಟ ನಡೆಸಿದ್ದರು. ಈ ನಡೆಯನ್ನು ದೇಶದ್ರೋಹವೆಂದು ಪರಿಗಣಿಸಲಾಗದು ಎಂದು ಆರೋಪಿ ಪರ ವಕೀಲರು ನ್ಯಾಯಾಲಕಕ್ಕೆ ಮನವರಿಕೆ ಮಾಡಿದರು. ಮಾತ್ರವಲ್ಲ ಪ್ರತಿಭಟನೆಯ ಹಕ್ಕು, ನಿರ್ಬಂಧಿಸುವ ಹಕ್ಕು ಮತ್ತು ದೇಶವನ್ನು ಸ್ಥಗಿತಗೊಳಿಸುವ ಹಕ್ಕು ದೇಶದ್ರೋಹದ ಕೃತ್ಯ ಸಮನಲ್ಲ ಎಂದು ಅವರು ತಿಳಿಸಿದರು.

ಶರ್ಜೀಲ್ ಇಮಾಮ್ ಯಾವುದೇ ನಿಷೇಧಿತ ಸಂಘಟನೆ ಅಥವಾ ಭಯೋತ್ಪಾದಕ ಗ್ಯಾಂಗ್ ನ ಸದಸ್ಯನಲ್ಲ. ಬದಲಾಗಿ ಆತ ವಿದ್ಯಾರ್ಥಿಯಾಗಿದ್ದಾರೆ ಎಂದು ಅವರು ನ್ಯಾಯಾಲಯಕ್ಕೆ ಒತ್ತಿ ಹೇಳಿದರು.



Join Whatsapp